Home » ಶಿಕ್ಷಕರು ಹೊಡೆದರೆಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ಕೊಟ್ಟ 2ನೇ ತರಗತಿ ವಿದ್ಯಾರ್ಥಿ|ಮುಗ್ಧತೆಯಲ್ಲಿ ಈ ಪುಟ್ಟ ಪೋರ ದೂರು ನೀಡುವ ವೀಡಿಯೋ ವೈರಲ್

ಶಿಕ್ಷಕರು ಹೊಡೆದರೆಂದು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ಕೊಟ್ಟ 2ನೇ ತರಗತಿ ವಿದ್ಯಾರ್ಥಿ|ಮುಗ್ಧತೆಯಲ್ಲಿ ಈ ಪುಟ್ಟ ಪೋರ ದೂರು ನೀಡುವ ವೀಡಿಯೋ ವೈರಲ್

0 comments

ಇಂದಿನ ಕಾಲದ ಮಕ್ಕಳಿಗೆ ಹೊಡೆದರೂ, ಬಡಿದರು, ಜಗಳವಾಡಿದರು ಅದು ಹಿಂಸೆಯೇ ಆಗಿಹೋಗಿರುತ್ತದೆ. ಹಿಂದೊಮ್ಮೆ ಗೆಳೆಯ ಪೆನ್ಸಿಲ್ ಕದ್ದ ಎಂದು ಪುಟ್ಟ ಬಾಲಕ ಪೊಲೀಸ್ ಗೆ ದೂರು ನೀಡಿದ ಘಟನೆಯನ್ನು ನೋಡಿದ್ದೀವಿ.ಇದೀಗ ಅದೇ ಸಾಲಿಗೆ ಇನ್ನೊಂದು ವಿದ್ಯಾರ್ಥಿ ಸೇರಿದ್ದು,ಶಿಕ್ಷಕರು ಹೊಡೆದಿದ್ದಕ್ಕೆ 2ನೇ ತರಗತಿ ವಿದ್ಯಾರ್ಥಿ ಶಾಲೆಯಿಂದ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಕೇಸ್ ಕೊಟ್ಟ ಘಟನೆ ನಡೆದಿದೆ.

ಈ ಘಟನೆ ತೆಲಂಗಾಣದ ಬಯ್ಯಾರಂ ಮಂಡಲದಲ್ಲಿ ನಡೆದಿದ್ದು,ಬಯ್ಯಾರಂ ಮಂಡಲದ ಖಾಸಗಿ ಶಾಲೆಯ ಎರಡನೆ ತರಗತಿಯ ವಿದ್ಯಾರ್ಥಿ ಅನಿಲ್ ದೂರು ನೀಡಿದವನು. ಈ ಪುಟ್ಟ ಪೋರ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಇನ್ಸ್ ಪೆಕ್ಟರ್ ಅವರಿಗೆ ದೂರು ನೀಡುವ ವಿಡಿಯೋ ವೈರಲ್ ಆಗಿದ್ದು,ಇನ್ಸ್ಪೆಕ್ಟರ್ ಎಲ್ಲಿಗೆ ಹೊಡೆದರು ಎಂದು ಕೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಲಕ ಕಾಲಿಗೆ ಹೊಡೆದಿದ್ದಾರೆ ಎಂದು ಪ್ರತಿಕ್ರಿಯಿಸಿ ಕ್ರಮಕ್ಕೆ ಆಗ್ರಹಿಸಿದ್ದಾನೆ.

ಈ ಕುರಿತ ವಿಡಿಯೋ ವೈರಲ್ ಆಗಿದ್ದು ಬಾಲಕನ ಮುಗ್ದತೆಗೆ ಜನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.ಕೊನೆಗೆ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿ ಇನ್ಸ್ ಪೆಕ್ಟರ್ ಬಾಲಕನನ್ನು ಕಳುಹಿಸಿ ಕೊಟ್ಟಿದ್ದಾರೆ.

You may also like

Leave a Comment