1
ಭಾರತ ಯುಕ್ರೇನ್ ನಲ್ಲಿ ಸಿಲುಕಿರುವ 15 ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ಕೇಂದ್ರ ಸರಕಾರ ಅಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಸ್ವದೇಶಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ ಇಲ್ಲೊಬ್ಬ ಭಾರತೀಯ ವ್ಯಕ್ತಿಗೆ ಮಾತ್ರ ಸ್ವದೇಶಕ್ಕೆ ಮರಳಲು ಆಗದ ಪರಿಸ್ಥಿತಿ ಎದುರಾಗಿದೆಯಂತೆ.
ಇವರ ಈ ಸಮಸ್ಯೆಗೆ ಕಾರಣ ಬೇರಾರೂ ಅಲ್ಲ ಅವರ ಪತ್ನಿ. ಗಗನ್ ಎಂಬ ವ್ಯಕ್ತಿ ಪತ್ನಿಯ ಕಾರಣದಿಂದಾಗಿ ಭಾರತಕ್ಕೆ ಬರಲಾಗದೆ ಪರದಾಡುತ್ತಿದ್ದಾರೆ. ಈ ಬಗ್ಗೆ ಖುದ್ದು ಅವರೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ, ‘ ನಾನು ಭಾರತೀಯ. ನಾನು ಭಾರತಕ್ಕೆ ಹೋಗಬಹುದು. ಆದರೆ ನನ್ನ ಪತ್ನಿ ಭಾರತಕ್ಕೆ ಹೋಗಲು ಸಾಧ್ಯವಿಲ್ಲ. ಕಾರಣವೇನೆಂದರೆ ಆಕೆ ಯುಕ್ರೇನಿನ ಪ್ರಜೆ. ನನ್ನ ಪತ್ನಿ 8 ತಿಂಗಳ ಗರ್ಭಿಣಿ. ಆಕೆಯನ್ನು ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ನಾನಿಲ್ಲ. ಹಾಗಾಗಿ ನಾನು ಪೋಲಂಡ್ ಗೆ ಹೋಗುವ ಯೋಚನೆಯಲ್ಲಿದ್ದೇನೆ. ಸದ್ಯಕ್ಕೆ ಈಗ ಗಗನ್ ಅವರು ಗೆಳೆಯರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿರುವುದಾಗಿ ಹೇಳಿದ್ದಾರೆ.
