Home » ಬಾಲಿವುಡ್ ನಟಿಗೆ ಎದುರಾಗಿದೆ ಬಂಧನದ ಭೀತಿ!! ಸಲ್ಲು ಜೊತೆ ಅಭಿನಯಿಸಿದ್ದ ಈಕೆಗೆ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಲು ಕಾರಣ!?

ಬಾಲಿವುಡ್ ನಟಿಗೆ ಎದುರಾಗಿದೆ ಬಂಧನದ ಭೀತಿ!! ಸಲ್ಲು ಜೊತೆ ಅಭಿನಯಿಸಿದ್ದ ಈಕೆಗೆ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಲು ಕಾರಣ!?

0 comments

ಅಡ್ವಾನ್ಸ್ ಪಡೆದು ಕಾರ್ಯಕ್ರಮಕ್ಕೆ ಹೋಗದೆ ತಪ್ಪಿಸಿಕೊಂಡು ವಂಚನೆ ನಡೆಸಿದ ಆರೋಪದಡಿಯಲ್ಲಿ ಖ್ಯಾತ ಬಾಲಿವುಡ್ ನಟಿಯ ಮೇಲೆ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಸದ್ಯ 37 ಲಕ್ಷ ಹಣ ಪಡೆದುಕೊಂಡು ವಂಚನೆ ನಡೆಸಿದ ನಟಿಯನ್ನು ಸೋನಾಕ್ಷಿ ಸಿನ್ಹ ಎಂದು ಹೇಳಲಾಗಿದೆ.

ಸಲ್ಲು ಅಭಿನಯದ ದಬಾಂಗ್ ಸಿನಿಮಾದ ಮೂಲಕ ತೆರೆಗೆ ಪರಿಚಯಿಸಿಕೊಂಡಿದ್ದ ಸಿನ್ಹ, ಆ ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಐಟಂ ಸಾಂಗ್ ನಲ್ಲಿ ಬಿಝಿ ಆಗಿರುವ ಮಧ್ಯೆಯೇ ಬಂಧನದ ಭೀತಿ ಎದುರಾಗಿದ್ದು ನಟಿಯ ಕಳವಳಕ್ಕೆ ಕಾರಣವಾಗಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ನಟಿ 37 ಲಕ್ಷ ಹಣವನ್ನೂ ಪಡೆದುಕೊಂಡಿದ್ದರು. ಆ ಬಳಿಕ ಕಾರ್ಯಕ್ರಮಕ್ಕೆ ತಪ್ಪಿಸಿ ವಂಚನೆ ನಡೆಸಿದ್ದು, ಕಾರ್ಯಕ್ರಮ ಆಯೋಜಕರು ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ್ದರು. ಇದಕ್ಕೆ ಒಪ್ಪದ ಸಿನ್ಹ ಹಣ ನೀಡದೆ ಸತಾಯಿಸಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿ ನಟಿಗೆ ವಾರಂಟ್ ಜಾರಿ ಮಾಡಲಾಗಿದೆ.

You may also like

Leave a Comment