Home » ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ದಾರುಣ ಸಾವು !!

ಬೆಕ್ಕು ಕಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ದಾರುಣ ಸಾವು !!

0 comments

ಎರಡು ತಿಂಗಳ ಹಿಂದೆ ಬೆಕ್ಕೊಂದು ಕಚ್ಚಿದ ಪರಿಣಾಮ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಕಮಲ(64) ಹಾಗೂ ನಾಗಮಣಿ(43) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇವರು ಮೊವ್ವಾ ಮಂಡಲ್ ನಲ್ಲಿರುವ ವೆಮುಲಮಾಡ ಗ್ರಾಮದ ನಿವಾಸಿಗಳು.

ಕಮಲ ಹಾಗೂ ನಾಗಮಣಿಗೆ ಇಬ್ಬರಿಗೂ ಎರಡು ತಿಂಗಳ ಹಿಂದೆ ಒಂದೇ ಬೆಕ್ಕು ಕಚ್ಚಿತ್ತು. ಕೂಡಲೇ ಅವರು ಸ್ಥಳೀಯ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಕೂಡ ಪಡೆದುಕೊಂಡಿದ್ದರು. ಆದರೆ ಮಾ.4 ರಂದು ಕಮಲಾ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದು, ಹೀಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಇತ್ತ ನಾಗಮಣಿ ಆರೋಗ್ಯ ಕೂಡ ಕೈಕೊಟ್ಟಿದ್ದರಿಂದ ಅವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಶನಿವಾರ ಮೃತಪಟ್ಟಿದ್ದಾರೆ.

ಬೆಕ್ಕು ಕಚ್ಚಿದ ನಂತರ ಈ ಮಹಿಳೆಯರಿಗೆ ರೇಬಿಸ್ ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾಯಿ, ಇಲಿ, ಹಾವು ಕಚ್ಚಿದರೆ ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಆರೋಗ್ಯ ಕೇಂದ್ರದ ಅಧಿಕಾರಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

You may also like

Leave a Comment