ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 10 ಮತ್ತು 12ನೇ ತರಗತಿ ಅವಧಿ 2ರ ಬೋರ್ಡ್ ಪರೀಕ್ಷೆಗಳಿಗೆ ವಿವರವಾದ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.
Term-II examinations for classes 10 and 12 to be held from April 26, 2022. This time exam timings will be 10:30 am and won't be conducted in two shifts. Further details available on the official website: CBSE pic.twitter.com/x51FrkN9CL
ಏಪ್ರಿಲ್ 26ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ ಎಂದು ತಿಳಿಸಿದ್ದು,CBSE ಶೀಘ್ರದಲ್ಲೇ ತಮ್ಮ ಅಧಿಕೃತ ವೆಬ್ ಸೈಟ್ ನಲ್ಲಿ ಟರ್ಮ್ 1 ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸುವ ನಿರೀಕ್ಷೆಯಿದೆ.
ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಇಲ್ಲದಿದ್ದರೂ, ಮಂಡಳಿಯು ಈ ಹಿಂದೆ 12 ನೇ ತರಗತಿಯ ಅವಧಿ- 1ರ ಫಲಿತಾಂಶಗಳನ್ನು ಶುಕ್ರವಾರದ ವೇಳೆಗೆ ನಿರೀಕ್ಷಿಸಲಾಗಿದೆ ಮತ್ತು ವರದಿಗಳ ಪ್ರಕಾರ 10 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿತ್ತು.’ಫಲಿತಾಂಶಗಳ ಸಿದ್ಧತೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಯಾವಾಗ ಬೇಕಾದರೂ ಫಲಿತಾಂಶ ಘೋಷಿಸಬಹುದು. ಮಂಡಳಿಯು ಶೀಘ್ರದಲ್ಲೇ ಸೂಚನೆ ನೀಡುತ್ತದೆ’ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.