Home » ಪ್ರೀತಿಸಿ ಮದುವೆಯಾದ ಯುವತಿಯ ಗಂಡ ನಾಪತ್ತೆ| ಬಾಡಿಗೆ ಮನೆ ಮಾಡಿದ್ದೇ ಅಪಹರಣಕ್ಕೆ ಕಾರಣವಾಯಿತೇ ?

ಪ್ರೀತಿಸಿ ಮದುವೆಯಾದ ಯುವತಿಯ ಗಂಡ ನಾಪತ್ತೆ| ಬಾಡಿಗೆ ಮನೆ ಮಾಡಿದ್ದೇ ಅಪಹರಣಕ್ಕೆ ಕಾರಣವಾಯಿತೇ ?

1 comment

ಚಿತ್ತೂರು : ಪತಿ ಕಾಣುತ್ತಿಲ್ಲ ಎಂದು ಯುವತಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆಯೊಂದು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದ್ದು, ಅತ್ತೆ ಮನೆಯ ವಿರುದ್ಧ ಆರೋಪ ಮಾಡಿದ್ದಾಳೆ‌.

ಆಂಧ್ರದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೊಹಮ್ಮದ್ ಸನಾ, ಮದನಪಲ್ಲಿ ಗ್ರಾಮೀಣ ವಲಯದ ವಂದ್ಲಪಲ್ಲಿ ಮೂಲದ ರಮೇಶ್ ಕುಮಾರ್ ಎಂಬಾತನನ್ನು ಪ್ರೀತಿಸಿ ಜನವರಿ 4 ರಂದು ಮದುವೆಯಾಗಿದ್ದು, ಮದುವೆಯಾದ ಮರುದಿನವೇ ಅತ್ತೆ ಮನೆಯವರು ಕಿರುಕುಳ ನೀಡಲು ಆರಂಭಿಸಿದ್ದರು ಎಂದು ಸನಾ ಆರೋಪ ಮಾಡಿದ್ದಾಳೆ. ಮದನಪಲ್ಲಿಯಲ್ಲಿ ಬಾಡಿಗೆ ಮನೆಯೊಂದಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರಗೊಂಡಿದ್ದೆವು. ಮೂರು ದಿನಗಳ ಹಿಂದೆ ಹೊರ ಹೋಗಿ ಬರುವುದಾಗಿ ಹೇಳಿದ ಪತಿ ಇನ್ನೂ ಬಂದಿಲ್ಲ , ಅತ್ತೆಯೇ ನನ್ನ ಪತಿಯನ್ನು ಬಚ್ಚಿಟ್ಟಿದ್ದಾರೆಂದು ಸನಾ ಆರೋಪ ಮಾಡಿದ್ದಾಳೆ.

ಈ ಕುರಿತು ಸನಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

You may also like

Leave a Comment