Home » ಖತರ್ನಾಕ್ ಬೈಕ್ ಕಳ್ಳ ಪತಿಯನ್ನು ರೆಡ್ ಹ್ಯಾಂಡಾಗಿ ಪೊಲೀಸರಿಗೊಪ್ಪಿಸಿದ ಪತ್ನಿ !!

ಖತರ್ನಾಕ್ ಬೈಕ್ ಕಳ್ಳ ಪತಿಯನ್ನು ರೆಡ್ ಹ್ಯಾಂಡಾಗಿ ಪೊಲೀಸರಿಗೊಪ್ಪಿಸಿದ ಪತ್ನಿ !!

0 comments

ಖತರ್ನಾಕ್ ಬೈಕ್ ಕಳ್ಳ ಪತಿಯನ್ನು ಪತ್ನಿಯೇ ರೆಡ್ ಹ್ಯಾಂಡಾಗಿ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಅರೆಕೆರೆಯಲ್ಲಿ ನಡೆದಿದೆ.

ದೊಡ್ಡಪಾಳ್ಯ ಗ್ರಾಮದ ಮಧು ಬಂಧಿತ ಬೈಕ್ ಕಳ್ಳ ಆರೋಪಿ. ಬಂಧಿತನಿಂದ ಪೊಲೀಸರು ಸುಮಾರು 3 ಲಕ್ಷ ಮೌಲ್ಯದ 10 ಬೈಕ್ ಗಳ ಜಪ್ತಿ ಮಾಡಿದ್ದಾರೆ. ಅರೆಕೆರೆ ಗ್ರಾಮದ ಪತ್ನಿ ಸೌಮ್ಯ ಮನೆಯಲ್ಲೂ 1 ಲಕ್ಷ ರೂ. ಕಳವು ಮಾಡಿದ್ದ ಆರೋಪವೂ ಪತಿ ಮೇಲೆ ಇದೆ.

ಆರೋಪಿ ಪತಿಯ ಕಳ್ಳತನ ಗೊತ್ತಾಗಿ ಪತ್ನಿ ಪೋಲೀಸರಿಗೆ ದೂರು ನೀಡಿದ್ದರು. ಆರೋಪಿ ಪತ್ನಿ‌ ಮನೆಗೆ ಬಂದಾಗ ಅರೆಕೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮಧು ಮಂಡ್ಯ ನಗರದ ಹಲವು ಕಡೆ ಬೈಕ್ ಗಳನ್ನು ಕಳ್ಳತನ‌ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸದ್ಯ ಪೊಲೀಸರು ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

You may also like

Leave a Comment