Home » ಅಗತ್ಯ ಕೆಲಸಗಳಿದ್ದಲ್ಲಿ ಇಂದೇ ಮಾಡಿಸಿಕೊಳ್ಳಿ-ಮುಂದಿನ ವಾರ ಬರೋಬ್ಬರಿ ನಾಲ್ಕು ದಿನಗಳ ಕಾಲ ಕಾರ್ಯ ನಿಲ್ಲಿಸಲಿದೆ ಬ್ಯಾಂಕ್!!

ಅಗತ್ಯ ಕೆಲಸಗಳಿದ್ದಲ್ಲಿ ಇಂದೇ ಮಾಡಿಸಿಕೊಳ್ಳಿ-ಮುಂದಿನ ವಾರ ಬರೋಬ್ಬರಿ ನಾಲ್ಕು ದಿನಗಳ ಕಾಲ ಕಾರ್ಯ ನಿಲ್ಲಿಸಲಿದೆ ಬ್ಯಾಂಕ್!!

0 comments

ದೇಶದ ಕೆಲ ಭಾಗಗಳಲ್ಲಿ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರುವ ಹಿನ್ನೆಲೆಯಲ್ಲಿ ಗ್ರಾಹಕರು ಸಹಕರಿಸುವಂತೆ ಕೋರಲಾಗಿದ್ದು, ಅಗತ್ಯ ಕೆಲಸಗಳಿದ್ದಲ್ಲಿ ಶೀಘ್ರವೇ ಮಾಡಿಸಿಕೊಳ್ಳಲು ವಿನಂತಿಸಲಾಗಿದೆ.

ಮಾರ್ಚ್ 17 ರಂದು ಉತ್ತರ ಪ್ರದೇಶ, ಉತ್ತರಖಂಡ, ಜಾರ್ಖಂಡ್ ನಲ್ಲಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ರಜೆ ಸಾರಲಾಗಿದ್ದು, ಉಳಿದಂತೆ ಜಮ್ಮು, ನಾಗಾಪುರ, ಲಕ್ನೋ, ಮುಂಬೈ, ಶ್ರೀನಗರ, ಅಹಮದಾಬಾದ್ ಮುಂತಾದ ರಾಜ್ಯಗಳಲ್ಲಿ ಮಾರ್ಚ್ 18,19, ರಂದು ಹೋಳಿ ಆಚರಣೆ ನಡೆಯಲಿದ್ದು ಸದ್ಯ ಈ ಮೂರು ದಿನಗಳ ಕಾಲ ಬ್ಯಾಂಕ್ ತನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲಿದೆ. ಮಾರ್ಚ್ 20 ರಂದು ಎಂದಿನಂತೆ ಬ್ಯಾಂಕ್ ಗೆ ವಾರದ ರಜೆ ಇದ್ದು ಒಟ್ಟಿನಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ರಜೆ ಘೋಷಿಸಲಾಗಿದೆ.

ಪ್ರತಿವರ್ಷ ಆರ್.ಬಿ.ಐ ತನ್ನ ವಲಯದ ಬ್ಯಾಂಕ್ ಗಳಿಗೆ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ, ದೀಪಾವಳಿ, ಕ್ರಿಸ್ಮಸ್, ಈದ್ ಮುಂತಾದ ಸಾರ್ವಜನಿಕ ಹಾಗೂ ರಾಷ್ಟ್ರೀಯ ಹಬ್ಬಗಳಿಗೆ ಬ್ಯಾಂಕ್ ಗಳಿಗೆ ರಜೆ ಇರುವುದು ಸಾಮಾನ್ಯ.

You may also like

Leave a Comment