Home » ನಾಳೆ ಬೆಳಗ್ಗೆ ಹಿಜಾಬ್ ಕುರಿತು ತೀರ್ಪು ಪ್ರಕಟ!! | ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ

ನಾಳೆ ಬೆಳಗ್ಗೆ ಹಿಜಾಬ್ ಕುರಿತು ತೀರ್ಪು ಪ್ರಕಟ!! | ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ

0 comments

ದೇಶದ್ಯಾಂತ ಸಂಚಲನ ಸೃಷ್ಟಿಸಿದ್ದ ಹಿಜಾಬ್‌ ವಿವಾದಕ್ಕೆ ನಾಳೆ ಪೂರ್ಣವಿರಾಮ ಬೀಳುವ ಸಾಧ್ಯತೆ ಇದೆ. ಹಿಜಾಬ್ ಕುರಿತಾದ ಮಹತ್ವದ ತೀರ್ಪು ನಾಳೆ ಬೆಳಗ್ಗೆ 10:30ಕ್ಕೆ ಪ್ರಕಟವಾಗಲಿದೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ತೀರ್ಪು ಪ್ರಕಟಿಸಲಿದೆ.

ಹಿಜಾಬ್‌ ನಿಷೇಧಕ್ಕೆ ಸಂಬಂಧಿಸಿದಂತೆ 11 ದಿನಗಳ ಕಾಲ ಎರಡು ಕಡೆಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಫೆ.25 ರಂದು ತೀರ್ಪು ಕಾಯ್ದಿರಿಸಿತ್ತು. ಆದರೆ ಈ ಪ್ರಕರಣದ ತೀರ್ಪು ನಾಳೆ ಪ್ರಕಟವಾಗಲಿದ್ದು ಎಲ್ಲರ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ.

You may also like

Leave a Comment