Home » ಬಿಜೆಪಿ ಮುಖಂಡನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | ಸಾವಿನ ಸುತ್ತ ಹಲವು ಅನುಮಾನ

ಬಿಜೆಪಿ ಮುಖಂಡನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | ಸಾವಿನ ಸುತ್ತ ಹಲವು ಅನುಮಾನ

0 comments

ಸಾಗರ: ತಾಲೂಕಿನ ಮರತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

ಈ ಸಾವಿನ ಹಿಂದೆ ಹತ್ತು ಹಲವಾರು ಅನುಮಾನಗಳು ಮೂಡಿದೆ. ಶಿರೂರು ಆಲಳ್ಳಿ ವಾಸಿಯಾದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಅಣ್ಣಪ್ಪ ಅವರು ನಗರದ ಹೆಲಿಪ್ಯಾಡ್ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಾಗರ ಉಪ ವಿಭಾಗದ ಎಎಸ್‌ಪಿ ರೋಹನ್ ಜಗದೀಶ್, ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಗಿರೀಶ್, ಅಪರಾಧ ವಿಭಾಗದ ಸುಜಾತ, ಶಿವಮೊಗ್ಗ ಪೊಲೀಸ್ ಶ್ವಾನ ದಳ, ಬೆರಳಚ್ಚುಗಾರರ ತಂಡ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

You may also like

Leave a Comment