Home » ಹದಿನಾಲ್ಕು ವರ್ಷದಲ್ಲಿ ಕಾಣದಷ್ಟು ಏರಿಕೆ ಕಂಡಿದ್ದ ಕಚ್ಚಾ ತೈಲ ದರ ಇಳಿಕೆ|ಕಾರಣ ಇಲ್ಲಿದೆ ನೋಡಿ..

ಹದಿನಾಲ್ಕು ವರ್ಷದಲ್ಲಿ ಕಾಣದಷ್ಟು ಏರಿಕೆ ಕಂಡಿದ್ದ ಕಚ್ಚಾ ತೈಲ ದರ ಇಳಿಕೆ|ಕಾರಣ ಇಲ್ಲಿದೆ ನೋಡಿ..

0 comments

ನವದೆಹಲಿ:ವಾಹನ ಸವಾರರಿಗೆ ತೈಲ ಬೆಲೆ ಏರಿಕೆಯಿಂದಾಗಿ ಓಡಾಟ ನಡೆಸಲೂ ಸ್ವಲ್ಪ ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಯಾಕೆಂದರೆ ಅಷ್ಟರ ಮಟ್ಟಿಗೆ ಇಂಧನ ಬೆಲೆ ಹೆಚ್ಚಾಗಿತ್ತು. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಕಳೆದ ಹದಿನಾಲ್ಕು ವರ್ಷಗಳಲ್ಲಿ ಏರಿಕೆಯಾದಕ್ಕಿಂತ ಹೆಚ್ಚೇ ಏರಿಕೆಯಾಗಿದ್ದು ಇದೀಗ ಇಳಿಕೆಯಾಗುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಚ್ಚಾ ತೈಲ ದರ ಇಳಿಕೆಗೆ ರಷ್ಯಾ ನಡುವಿನ ಕದನ ವಿರಾಮ ಮಾತುಕತೆ ಬೆಳವಣಿಗೆಗಳು, ಇರಾನ್ ಪರಮಾಣು ಒಪ್ಪಂದಕ್ಕೆ ರಷ್ಯಾ ಸಹಮತ ವ್ಯಕ್ತಪಡಿಸಿದ್ದೇ ಕಾರಣ ಎನ್ನಲಾಗಿದೆ.ಮಾ. 7 ರಂದು ಪ್ರತಿ ಬ್ಯಾರೆಲ್ ಗೆ 139 ಡಾಲರ್ ವರೆಗೂ ಏರಿಕೆಯಾಗಿದ್ದ ಕಚ್ಚಾ ತೈಲದ ದರ ನಿನ್ನೆ ಪ್ರತಿ ಬ್ಯಾರೆಲ್ ಗೆ 100 ಡಾಲರ್ ಗಿಂತಲೂ ಕಡಿಮೆಯಾಗುವ ಮೂಲಕ ವಾಹನ ಸವಾರರಿಗೆ ಖುಷಿ ಸಮಾಚಾರ ಒದಗಿಸಿದೆ.

You may also like

Leave a Comment