Home » ಬೆಳ್ತಂಗಡಿ: ಉಜಿರೆಯಲ್ಲೂ ಎದ್ದ ಹಿಜಾಬ್ ಕಿಡಿ!! | SDM ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪರೀಕ್ಷೆ ಬರೆಯದೆ ತರಗತಿ ಬಹಿಷ್ಕಾರ | ಹೈಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ

ಬೆಳ್ತಂಗಡಿ: ಉಜಿರೆಯಲ್ಲೂ ಎದ್ದ ಹಿಜಾಬ್ ಕಿಡಿ!! | SDM ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪರೀಕ್ಷೆ ಬರೆಯದೆ ತರಗತಿ ಬಹಿಷ್ಕಾರ | ಹೈಕೋರ್ಟ್ ತೀರ್ಪು ವಿರೋಧಿಸಿ ಪ್ರತಿಭಟನೆ

0 comments

ಬೆಳ್ತಂಗಡಿ : ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯ ಇಂದು ಕರ್ನಾಟಕ ಬಂದ್ ಘೋಷಿಸಿ ಪ್ರತಿಭಟನೆ ನಡೆಸುತ್ತಿದ್ದು , ಇದೀಗ ಉಜಿರೆಯಲ್ಲೂ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿನಿಯರು ನಿನ್ನೆ ಸಂಜೆವೇಳೆ ಹೋರಾಟ ನಡೆಸಿದ್ದಾರೆ.

ಎಸ್. ಡಿ.ಎಂ ಕಾಲೇಜಿನ ಮುಂಭಾಗದ ಮೈದಾನದಲ್ಲಿ SDM ಪದವಿ ಕಾಲೇಜಿನ
ಐದು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತರಗತಿಗಳಲ್ಲಿ ನಿಷೇಧಿಸಿದ ಹೈಕೋರ್ಟ್ ತೀರ್ಪುನ್ನು ವಿರೋಧಿಸಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಕಾಲೇಜ್ ನಲ್ಲಿ ಪರೀಕ್ಷೆ ನಡೆಯುತ್ತಿದ್ದು,ಹಿಜಾಬ್ ತೆಗೆದು ತರಗತಿಗೆ ಬಂದು ಪರೀಕ್ಷೆ ಬರೆಯುವ ಅನುಮತಿ ಇದ್ದರೂ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಪ್ರತಿಭಟನೆ ನಡೆಸಿದ್ದಾರೆ.ಭಿತ್ತಿಪತ್ರದಲ್ಲಿ ‘ಹೈ ಕೋರ್ಟ್ ತೀರ್ಪು ನೀಡಿದೆ ನ್ಯಾಯ ನೀಡಿಲ್ಲ’,’ಸರಕಾರವನ್ನು ಓಲೈಸುವ ತೀರ್ಪು ನಮಗೆ ಒಪ್ಪಲು ಸಾಧ್ಯವಿಲ್ಲ’,’ವಿದ್ಯಾರ್ಥಿಗಳ ಶಿಕ್ಷಣದ ನಿರಾಕರಣೆ ದೇಶದ ಭವಿಷ್ಯದ ನಿರಾಕರಣೆ’ ಎಂದು ಬರೆದು ಹಿಜಾಬ್ ಗೆ ಅನುಮತಿಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಈ ನಡೆಗೆ ಸಾರ್ವಜನಿಕರು ಹಾಗೂ ಆಡಳಿತ ಮಂಡಳಿಯು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು ಕಾಲೇಜಿನಲ್ಲಿ ಕೋಮು ಸಂಘರ್ಷ ನಡೆಯದಂತೆ ಶಿಕ್ಷಣ ಇಲಾಖೆ ಹಾಗೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕಿದೆ.

You may also like

Leave a Comment