Home » ಬರೋಬ್ಬರಿ 18 ತಿಂಗಳ ಬಳಿಕ ಸುದ್ದಿ ವಾಹಿನಿಗಳ ಟಿ ಆರ್ ಪಿ ಪ್ರಕಟ|ಯಾವ ವಾಹಿನಿ ಯಾವ ಸ್ಥಾನದಲ್ಲಿದೆ ನೋಡಿ..

ಬರೋಬ್ಬರಿ 18 ತಿಂಗಳ ಬಳಿಕ ಸುದ್ದಿ ವಾಹಿನಿಗಳ ಟಿ ಆರ್ ಪಿ ಪ್ರಕಟ|ಯಾವ ವಾಹಿನಿ ಯಾವ ಸ್ಥಾನದಲ್ಲಿದೆ ನೋಡಿ..

0 comments

ನವದೆಹಲಿ: ಹಗರಣದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಟಿ ಆರ್ ಪಿ ಪ್ರಕಟನೆ ಬರೋಬ್ಬರಿ 18 ತಿಂಗಳ ಬಳಿಕ ಪ್ರಕಟಗೊಂಡಿದೆ. ಟಿಆರ್ ಪಿ ಸುದ್ದಿ ವಾಹಿನಿಗಳ ಜನಪ್ರಿಯತೆಯಲ್ಲಿ ಮುಖ್ಯ ಪಾತ್ರವಹಿಸಿದ್ದು,ಇದರಿಂದಾಗಿ ಜಾಹಿರಾತುಗಳು ವಾಹಿನಿಗೆ ಹರಿದುಬರುತ್ತದೆ.

ರಾಜ್ಯದಲ್ಲಿ ಸುದ್ದಿ ವಾಹಿನಿಗಳ ಪೈಕಿ ಟಿವಿ-9 ಮೊದಲ ಸ್ಥಾನದಲ್ಲಿ,ಎರಡನೆ ಸ್ಥಾನ ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್ ಮೂರನೇ ಸ್ಥಾನದಲ್ಲಿ ಮತ್ತು ನ್ಯೂಸ್ 18 ಕನ್ನಡ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.ಇಂಗ್ಲೀಷ್ ಸುದ್ದಿ ವಾಹಿನಿಗಳ ಪೈಕಿ ರಿಪಬ್ಲಿಕ್ ಮೊದಲ ಸ್ಥಾನದಲ್ಲಿದೆ ಎಂದು ಹಕ್ಕು ಮಂಡಿಸಿದೆ.ಇದೇ ವೇಳೆ ಈಗಿರುವ ವ್ಯವಸ್ಥೆ ಪಾರದರ್ಶಕವಾಗಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.

You may also like

Leave a Comment