2
ಸರಿ ಸುಮಾರು ಐದು ವರ್ಷಗಳಿಂದ ಮಲಯಾಳಂ ಚಿತ್ರದಿಂದ ದೂರ ಉಳಿದಿದ್ದ ಬಹುಭಾಷ ನಟಿ ಭಾವನಾ, ಮತ್ತೊಮ್ಮೆ ಮಲಯಾಳಂ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯೊಂದು ಹರಿದಾಡಿದ ಬೆನ್ನಲ್ಲೇ ಸ್ಪಷ್ಟಿಕರಣ ನೀಡಿದ್ದಾರೆ.
2017 ರ ಕರಾಳ ಘಟನೆಯ ಬಳಿಕ ಮಲಯಾಳಂ ಚಿತ್ರರಂಗವನ್ನು ತೊರೆದು ಪುನೀತ್ ರಾಜ್ ಕುಮಾರ್ ನಟನೆಯ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಭಾವನಾ,ಬಳಿಕ ಕನ್ನಡದ ಖ್ಯಾತ ನಟರೊಂದಿಗೆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು.
ಸದ್ಯ ಐದು ವರ್ಷಗಳ ಬಳಿಕ ಆದಿಲ್ ಮೈಮೂನತ್ ನಿರ್ದೇಶನದ, ರೆನಿಷ್ ಅಬ್ದುಲ್ ಖಾದರ್ ನಿರ್ಮಾಣದ ಚಿತ್ರದಲ್ಲಿ ನಟಿಸಲು ಮುಂದಾಗಿದ್ದು, ತನ್ನ ಇನ್ಸ್ಟಾಗ್ರಾಮ್ ನಲ್ಲಿ ಚಿತ್ರದ ಪೋಸ್ಟ್ ನ್ನು ಹಂಚಿಕೊಂಡ ಬಳಿಕ ಮಲಯಾಳಂ ನ ಹಿರಿಯ ನಟರ ಸಹಿತ ಹಲವರು ಪೋಸ್ಟ್ ಹಂಚುವ ಮೂಲಕ ಶುಭಾಶಯ ಕೋರಿದ್ದಾರೆ.
