Home » 11 ವರ್ಷದ ಬಾಲಕಿ ಮೇಲೆ ಕುಟುಂಬದವರಿಂದಲೇ ನಿರಂತರ ಅತ್ಯಾಚಾರ|

11 ವರ್ಷದ ಬಾಲಕಿ ಮೇಲೆ ಕುಟುಂಬದವರಿಂದಲೇ ನಿರಂತರ ಅತ್ಯಾಚಾರ|

0 comments

ಐದು ವರ್ಷಗಳಿಂದ 11 ವರ್ಷದ ಬಾಲಕಿಯ ಮೇಲೆ ಸುಮಾರು ಐದು ವರ್ಷಗಳಿಂದ ಆಕೆಯ ಸ್ವಂತ ತಂದೆ, ಸಹೋದರ, ಅಜ್ಜ ಮತ್ತು ದೂರದ ಸಂಬಂಧಿಕನಿಂದ ಅತ್ಯಾಚಾರ ನಡೆದಿರುವ ಕ್ರೂರ ಘಟನೆಯೊಂದು ಪುಣೆಯಲ್ಲಿ ವರದಿಯಾಗಿದೆ.

ಈ ನಾಲ್ವರೂ ಬೇರೆ ಬೇರೆ ಸಂದರ್ಭಗಳಲ್ಲಿ ಈ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್‌ಗಳ ಅಡಿ ಪೊಲೀಸರು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಆದರೆ ಈವರೆಗೂ ಯಾರನ್ನೂ ಬಂಧಿಸಿಲ್ಲ.

ಅಪ್ರಾಪ್ತ ಬಾಲಕಿಯ ಸಹೋದರ, 45 ವರ್ಷದ ತಂದೆ ವಿರುದ್ಧ ಪುಣೆಯ ಪೊಲೀಸ್ ಠಾಣೆಯೊಂದರಲ್ಲಿ ಐಪಿಸಿ ಸೆಕ್ಷನ್ 376ರ ಅಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಈ ಬಾಲಕಿಗೆ ಈಗ 11 ವರ್ಷ. ಅಂದರೆ ಬಾಲಕಿಗೆ ಸುಮಾರು 6 ವರ್ಷ ಆಗಿದ್ದಾಗಲೇ ಈ ಅತ್ಯಾಚಾರ ಮಾಡಲಾಗಿತ್ತು. ಈ ಅಪ್ರಾಪ್ತ ಬಾಲಕಿಯ 60 ವರ್ಷದ ಅಜ್ಜ ಮತ್ತು ದೂರದ ಸಂಬಂಧಿ (25 ವರ್ಷ) ವಿರುದ್ಧ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿ ಮತ್ತು ಆಕೆಯ ಕುಟುಂಬದವರು ಬಿಹಾರ ಮೂಲದವರು. ಪ್ರಸ್ತುತ ಪುಣೆಯಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದಾರೆ. “ಶಾಲೆಯಲ್ಲಿ ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಾಯಿ ಬಿಟ್ಟಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಆಕೆಯ ಸುಮಾರು ಐದು ವರ್ಷ ಈ ಸಂಕಷ್ಟ ಅನುಭವಿಸಿದ್ದಾಳೆ” ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಅಶ್ವಿನಿ ಸತ್ಪುತೆ ತಿಳಿಸಿದ್ದಾರೆ.

You may also like

Leave a Comment