Home » ಇಂದು ಸುಳ್ಯದಲ್ಲಿ ಆಪ್ ಕಾರ್ಯಕರ್ತರ ಸಮಾವೇಶ

ಇಂದು ಸುಳ್ಯದಲ್ಲಿ ಆಪ್ ಕಾರ್ಯಕರ್ತರ ಸಮಾವೇಶ

by Praveen Chennavara
0 comments

ಸುಳ್ಯ : ಆಮ್ ಆದ್ಮಿ ಪಕ್ಷದ ಪಂಜಾಬ್ ಗೆಲುವನ್ನು ಆಚರಿಸಲು ಮತ್ತು ಸ್ಥಳೀಯವಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಮಾರ್ಚ್ 21 ಸೋಮವಾರದಂದು ಪಕ್ಷದ ಕಾರ್ಯಕರ್ತರ ಸಭೆ ಮತ್ತು ಸಾರ್ವಜನಿಕ ಸಭೆಯನ್ನು ಹಮ್ಮಿಕೊಂಡಿದೆ.

ಮದ್ಯಾಹ್ನ 2.30 ಕ್ಕೆ ಕಾನತ್ತಿಲ ದೇವಮ್ಮ ಸಂಕೀರ್ಣ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು ಸುಳ್ಯದ ಪ್ರಸಿದ್ಧ ವೃತ್ತಿಪರರು ಮತ್ತು ಸಾಮಾಜಿಕ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಂಜೆ 4 ಕ್ಕೆ ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸಭೆ ನಡೆಯಲಿದೆ.

ಆಪ್ ರಾಜ್ಯ ಸಂಚಾಲಕ ಹಾಗೂ ರಾಷ್ಟೀಯ ಕಾರ್ಯಕಾರಿಣಿ ಸದಸ್ಯರಾದ ಪೃಥ್ವಿ ರೆಡ್ಡಿ,ರಾಜ್ಯ ಸಂಘಟನಾ ಉಸ್ತುವಾರಿ ವಿಜಯ್ ಶರ್ಮ,ರಾಜ್ಯ ವಕ್ತಾರ ಜಗದೀಶ ಸದಮ್,ರಾಜ್ಯ ಸಂಘಟನಾ ಕಾರ್ಯದರ್ಶಿ ದರ್ಶನ್ ಜೈನ್, ರಾಜ್ಯ ಯುವ ಘಟಕದ ಸಂಚಾಲಕ ಮುಕುಂದ ಗೌಡ, ಬೆಂಗಳೂರು ನಗರ ಸಹ ಸಂಚಾಲಕ ಸುರೇಶ ರಾಥೋಡ್, ದ. ಕ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಅಶೋಕ್ ಎಡಮಲೆ, ದ.ಕ. ಜಿಲ್ಲಾ ಸಂಚಾಲಕ ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಂಚಾಲಕ ಸ್ಟಿಫೆನ್ ರಿಚರ್ಡ್ ಲೋಬೊ, ಮೊದಲಾದ ನಾಯಕರು ಭಾಗವಹಿಸಲಿದ್ದಾರೆ.

You may also like

Leave a Comment