Home » ಕೆಲಸ ಮುಗಿಸಿ 10 ಕಿ.ಮೀ.ಓಡುತ್ತಲೇ ಮನೆ ಸೇರೋ ಹುಡುಗನಿಗೆ ಸೇನಾಧಿಕಾರಿಯಿಂದ ದೊರಕಿತು ಬಂಪರ್ ಆಫರ್ !

ಕೆಲಸ ಮುಗಿಸಿ 10 ಕಿ.ಮೀ.ಓಡುತ್ತಲೇ ಮನೆ ಸೇರೋ ಹುಡುಗನಿಗೆ ಸೇನಾಧಿಕಾರಿಯಿಂದ ದೊರಕಿತು ಬಂಪರ್ ಆಫರ್ !

578 comments

ರಾತ್ರಿ ಕೆಲಸ ಮುಗಿಸಿದ ಬಳಿಕ 10 ಕಿಲೋ ಮೀಟರ್ ಓಡುತ್ತಲೇ ಮನೆ ಸೇರುತ್ತಿದ್ದ ಯುವಕನಿಗೆ ನಿವೃತ್ತ ಲೆಫ್ಟಿನೆಂಟ್ ಜನರಲ್‌ವೋರ್ವರು ಸಹಾಯ ಮಾಡಲು ಮುಂದಾಗಿದ್ದಾರೆ.

ಮೆಕ್‌ಡೊನಾಲ್ಡ್ ಕಂಪನಿಯಲ್ಲಿ ಕೆಲಸ ಮಾಡುವ 19 ವರ್ಷದ ಯುವಕ ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋ ಮೀಟರ್ ಓಡುತ್ತಲೇ ಮನೆ ಸೇರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದೀಗ ಈತನಿಗೆ ಅದೃಷ್ಟ ಒಲಿದು ಬಂದಿದೆ. ಭಾರತೀಯ ಸೇನೆ ಸೇರುವ ಉದ್ದೇಶದಿಂದ ಈ ಯುವಕ ಪ್ರತಿದಿನ ಹತ್ತು ಕಿ.ಮೀ ಓಡುತ್ತಲೇ ತನ್ನ ಮನೆ ಸೇರಿಕೊಳ್ಳುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಿವೃತ್ತ ಜನರಲ್ ಸತೀಸ್ ದುವಾ ಎಂಬುವವರು ಟ್ವಿಟ್ ಮಾಡಿದ್ದು, ಪ್ರದೀಪ್ ಮೆಹ್ರಾಗೆ ಭಾರತೀಯ ಸೇನೆ ಸೇರಲು ಸಕಲ ರೀತಿಯ ತರಬೇತಿ ನೀಡಲು ಸಿದ್ಧರಾಗಿರುವುದಾಗಿ ಪ್ರಕಟಿಸಿದ್ದಾರೆ.

ಈ ಯುವಕನ ಛಲ ಹಾಗೂ ಅರ್ಪಣಾ ಮನೋಭಾವಕ್ಕೆ ಸಿಕ್ಕ ಪ್ರತಿಫಲ ಎಂದೇ ಹೇಳಬಹುದು.

You may also like

Leave a Comment