Home » ಉರುಸ್ ನಲ್ಲಿ ಆಹಾರ ಸೇವಿಸಿದ 56 ಹೆಚ್ಚು ಜನರು ಅಸ್ವಸ್ಥ !! | 22 ಮಕ್ಕಳು ಸೇರಿದಂತೆ ಎಲ್ಲರೂ ಆಸ್ಪತ್ರೆಗೆ ದಾಖಲು

ಉರುಸ್ ನಲ್ಲಿ ಆಹಾರ ಸೇವಿಸಿದ 56 ಹೆಚ್ಚು ಜನರು ಅಸ್ವಸ್ಥ !! | 22 ಮಕ್ಕಳು ಸೇರಿದಂತೆ ಎಲ್ಲರೂ ಆಸ್ಪತ್ರೆಗೆ ದಾಖಲು

0 comments

ಉರುಸ್ ನಲ್ಲಿ ಆಹಾರ ಸೇವಿಸಿ 56ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಡೊಮನಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಯಮನೂರಪ್ಪನ‌ ಉರುಸ್ ಅಂಗವಾಗಿ ಸಾಮೂಹಿಕ ಉಪಹಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಮೂಹಿಕ ಉಪಹಾರ ಸೇವಿಸಿದ ಬಳಿಕ ಜನರಿಗೆ ವಾಂತಿ-ಬೇದಿ ಸಮಸ್ಯೆ ಕಾಣಿಸಿಕೊಂಡಿದ್ದು ಸುಮಾರು 56ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.

ಸಾಮೂಹಿಕ ಉಪಹಾರ ಕಾರ್ಯಕ್ರಮದಲ್ಲಿ ಉಪಹಾರ ಸೇವಿಸಿದ ಕೂಡಲೇ ಜನರಿಗೆ ವಾಂತಿ-ಬೇದಿ ಆರಂಭವಾಗಿದ್ದು 22 ಮಕ್ಕಳು ಹಾಗೂ 6 ಜನ ವಯಸ್ಕರನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 20 ಜನರನ್ನು ಸುತಗುಂಡಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಐದು ಅಂಬ್ಯಲೆನ್ಸ್ ಹಾಗೂ ಎರಡು 108 ವಾಹನದ ಮೂಲಕ ಅಸ್ವಸ್ಥರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ DHO ಡಾ.ಜಯಶ್ರೀ ಎಮ್ಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಾಹಾರ ಸೇವಿಸಿದ್ದ ಎಲ್ಲ‌ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ವಿಷಾಹಾರ ಸೇವನೆಯಿಂದ ಯಾರಿಗೂ ಜೀವಹಾನಿಯಾಗಿಲ್ಲ. ಆಹಾರ, ನೀರಿನ ಸ್ಯಾಂಪಲ್​ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಯಾಂಪಲ್ಸ್ ರಿಸಲ್ಟ್ ಬಂದ ನಂತರ ನಿಜಾಂಶ ತಿಳಿಯಲಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ ಹೇಳಿದ್ದಾರೆ.

You may also like

Leave a Comment