Home » ಸಿಹಿ ಸುದ್ದಿ : ಮಾರ್ಚ್ 31 ರ ನಂತರ ದೇಶಾದ್ಯಂತ ಎಲ್ಲಾ ಕೋವಿಡ್ ನಿರ್ಬಂಧ ರದ್ದು – ಕೇಂದ್ರ ಸರಕಾರ

ಸಿಹಿ ಸುದ್ದಿ : ಮಾರ್ಚ್ 31 ರ ನಂತರ ದೇಶಾದ್ಯಂತ ಎಲ್ಲಾ ಕೋವಿಡ್ ನಿರ್ಬಂಧ ರದ್ದು – ಕೇಂದ್ರ ಸರಕಾರ

0 comments

ಕೋವಿಡ್ ಸೋಂಕು ಗಣನೀಯವಾಗಿ ಕುಸಿದಿರುವ ಕಾರಣ ಮಾ.31ರಿಂದ ದೇಶಾದ್ಯಂತ ಎಲ್ಲಾ ಕೋವಿಡ್ ನಿರ್ಬಂಧಗಳು ರದ್ದಾಗಲಿವೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲನೆ ಹೊರತುಪಡಿಸಿ ಮಿಕ್ಕೆಲ್ಲಾ ನಿರ್ಬಂಧಗಳನ್ನು ಸಡಿಲಗೊಳಿಸಿ ಕೇಂದ್ರ ಸರಕಾರ ಮಾರ್ಗಸೂಚಿ ಹೊರಡಿಸಿದೆ.

ಅಲ್ಲದೆ, ‘ವಿಪತ್ತು ನಿರ್ವಹಣಾ ಕಾಯಿದೆ’ಯ ನಿಯಮಗಳನ್ನು ಪರಿಷ್ಕರಿಸಿ, ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ2020ರ ಮಾ.24ರಂದು ಕೇಂದ್ರ ಸರಕಾರ
ಕೋವಿಡ್ ಮಾರ್ಗಸೂಚಿಗಳನ್ನು ‘ವಿಪತ್ತು ನಿರ್ವಹಣಾ ಕಾಯಿದೆ’ಗೆ ಸೇರಿಸಿತ್ತು. ಆ ಮೂಲಕ ಉಲ್ಲಂಘಿಘಿಸಿದವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿತ್ತು. ಆದರೆ ಕೊರೊನಾ ಸೋಂಕು ಕಡಿಮೆ ಆಗಿರುವುದರಿಂದ ಕೇಂದ್ರ ಸರಕಾರ ಎಲ್ಲಾ ಮಾರ್ಗಸೂಚಿಗಳನ್ನು ಕೈ ಬಿಟ್ಟಿದೆ.

You may also like

Leave a Comment