ಭೂತ, ಪ್ರೇತಗಳಿರುವ ಸ್ಥಳಗಳಿಗೆ ಯಾರು ತಾನೇ ಹೋಗುತ್ತಾರೆ ಹೇಳಿ. ಹಾಗೇನಾದರೂ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾರೂ ಜೀವದ ಆಸೆ ಬಿಟ್ಟು ಅಂತ ಸ್ಥಳಗಳಿಗೆ ಭೇಟಿ ಬಿಡಿ, ಯೋಚನೆ ಕೂಡ ಮಾಡಲ್ಲ. ಅಂತಹುದೇ ಕೆಲವೊಂದು ಜಾಗ ಜಪಾನ್ ದೇಶದಲ್ಲಿದೆ.
ಜಪಾನ್ ದೇಶದ ಪ್ರವಾಸ ಎಲ್ಲರೂ ಇಷ್ಟಪಡುತ್ತಾರೆ. ಜಪಾನ್ ದೇಶ ಅದ್ಭುತವಾದ ಪ್ರವಾಸಿ ತಾಣಗಳಿಗೆ ನೆಲೆಯಾಗಿದೆ. ಹಾಗಾಗಿಯೇ ಪ್ರಪಂಚದ ಮೂಲೆ ಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಜಪಾನ್ ನಲ್ಲಿ ಸುಂದರವಾದ ತಾಣಗಳ ಜೊತೆ ಜೊತೆಗೆ ಭಯಾನಕತೆಯನ್ನು ಹೊಂದಿರುವ ಆಗೋಚರ ಶಕ್ತಿಗಳ ನೆಲೆಯೂ ಇವೆ. ಈ ತಾಣಗಳಿಗೆ ಭೇಟಿ ನೀಡುವುದನ್ನು ಜಪಾನ್ ದೇಶ ನಿರ್ಬಂಧ ಹೇರಿದೆ.
ಅವು ಯಾವುದೆಂದು ತಿಳಿಯೋಣ :
- ಕ್ಯಾಂಪ್ ಹ್ಯಾನ್ಸೆನ್, ಓಕಿನಾವಾ : ಜಪಾನ್ ದೇಶ ತನ್ನ ಬಹುತೇಕ ಸೈನಿಕರನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಕಳೆದುಕೊಂಡಿತು. ಈ ಆತ್ಮಗಳ ಸಂಚಾರ ಇಲ್ಲಿದೆ ಎಂದು ಹೇಳಲಾಗುತ್ತಿದೆ ಹೆಚ್ಚಾಗಿ ನಂಬಲಾಗುತ್ತದೆ. ಜಪಾನ್ ದೇಶದಲ್ಲಿ ಓಕಿನಾವಾ ಎಂಬಲ್ಲಿ ಈ ಕ್ಯಾಂಪ್ ಹ್ಯಾನ್ಸೆನ್ ಇದೆ. ಇಲ್ಲಿ ಒಂಟಿ ಸೈನಿಕನೊಬ್ಬ ರಕ್ತಸಿಕ್ತವಾದ ಬಟ್ಟೆಯಲ್ಲಿ ಕಾಣಿಸಿಕೊಂಡು ಸಿಗರೇಟ್ ಕೇಳುತ್ತಾನೆ ಮತ್ತೆ ಮಾಯವಾಗುತ್ತಾನೆ ಎಂಬಂತೆ ಜನ ಮಾತನಾಡುತ್ತಾರೆ. ಇಲ್ಲಿನ ಶಿಬಿರದಲ್ಲಿ ಅನೇಕ ಜನರಿಗೆ ಈ ರೀತಿಯ ಅನುಭವ ನಡೆದಿರುವ ಬಗ್ಗೆ ವರದಿಯಾಗಿದೆ.
- ಇನುಕಾನೆ ಪಾಸ್ ಸುರಂಗ, ಪುಕುವೋಕಾ : ಜಪಾನ್ ದೇಶದ ಈ ಪ್ರೇತಭಾದಿತ ಸ್ಥಳವು ವಿಶ್ವದಲ್ಲಿನ ಭಯಾನಕ ಸ್ಥಳಗಳಲ್ಲಿ ಒಂದು. ಪುಕುವೋಕಾದಲ್ಲಿ ಇನುಕೇನ್ ಪಾಸ್ ಎಂಬ ಸುರಂಗವಿದೆ. ಇದನ್ನು ಓಲ್ಡ್ ಚುಸೆಟ್ಸ್ ಎಂದೇ ಜನಪ್ರಿಯವಾಗಿದೆ. ಈ ಸುರಂಗವು ಜಪಾನ್ ದೇಶದ ಕ್ಯುಶು ದ್ವೀಪದಲ್ಲಿದೆ. ದಂತಕಥೆಯ ಪ್ರಕಾರ, ದಶಕಗಳ ಹಿಂದೆ ಒಬ್ಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಇಲ್ಲಿ ಎಸೆದು ಹೋಗಿದ್ದ. ಆದರೆ ಆಕೆಯನ್ನು ಕೊಂದವರು ಎಂದಿಗೂ ಸಿಕ್ಕಿಬೀಳಲಿಲ್ಲ. ಅಂದಿನಿಂದ ಆಕೆಯ ಆತ್ಮ ಈ ಸುರಂಗದ ಸುತ್ತಲೇ ಅಲೆಯುತ್ತಿದೆ ಎಂದು ಹೇಳಲಾಗುತ್ತದೆ. ಸುರಂಗ ಬಳಿ ಯಾರ ಪ್ರವೇಶಕ್ಕೂಈ ಆತ್ಮ ಬರಲು ಬಿಡುವುದಿಲ್ಲವಂತೆ. ಹೋದರೆ ಏನಾದರೂ, ಯಾವುದಾದರೂ ಅನಾಹುತಕ್ಕೆ ಕಟ್ಟಿಟ್ಟ ಬುತ್ತಿ ಎಂದು ಇಲ್ಲಿನ ಜನರು ದೃಢವಾಗಿ ನಂಬುತ್ತಾರೆ.
- ಒಯಿರಾನ್ ಬುಚಿ ಸೇತುವೆ, ಯಮನಶಿ : ಇದು ಜಪಾನ್ ದೇಶದ ಯಮುನಶಿಯಲ್ಲಿರುವ ಸೇತುವೆ. ದಂತ ಕಥೆಯ ಪ್ರಕಾರ, ಒಂದು ಕಾಲದಲ್ಲಿ ಸುಮಾರು 55 ವೇಶ್ಯೇಯರನ್ನು ಕೆಲವು ಗಣಿಗಾರರು ಬರ್ಬರವಾಗಿ ಕೊಂದಿದ್ದರು ಎಂದು ನಂಬಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿ ಮಹಿಳೆಯರ ಗೋಳಾಟಗಳು, ಅಳುವುದು ಕೇಳಿ ಬರುತ್ತವೆಯಂತೆ. ಆ ಧ್ವನಿಯು ಅತ್ಯಂತ ವಿಚಿತ್ರ ಹಾಗು ಕರ್ಕಶವಾಗಿರುತ್ತದೆ ಎಂದು ಅನುಭವಿಗಳು ಹೇಳುತ್ತಾರೆ. ಈ ತಾಣವು ಕೂಡ ಪ್ರೇತಬಾಧಿತ ಸ್ಥಳ ಎಂದು ಕರೆಯಲಾಗುತ್ತದೆ.
- ರೌಂಟ್ ಸ್ಕೂಲ್ ಹೌಸ್, ಹೊಕ್ರೈಡೋ : ಇದು ಹೊಕೈಡೊದಲ್ಲಿ ನೆಲೆಗೊಂಡಿರುವ ಹಾಗೂ ಸಂಪೂರ್ಣವಾಗಿ ಹಿಮದಿಂದ ಆವೃತ್ತವಾಗಿರುವ ಹಳೆಯ ಮನೆ. ಒಂದು ಕಾಲದಲ್ಲಿ ಸ್ವರ್ಗದಂತಿದ್ದ ಈ ಮನೆಯು ಈಗ ಪ್ರೇತ ಬಾಧಿತ ಸ್ಥಳವಾಗಿದೆ. ಈ ಮನೆಯಲ್ಲಿ ಗಣಿಗಾರರು ಮತ್ತು ಅವರ ಮಕ್ಕಳು ವಾಸಿಸುತ್ತಿದ್ದರು. ಒಮ್ಮೆ ಈ ಪ್ರದೇಶವನ್ನು ತೊರೆದು ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದರಿಂದ ಈ ಮನೆಯು ಖಾಲಿ ಬಿಡಲಾಯಿತು. ಅಂದಿನಿಂದ ಇದು ಜಪಾನ್ ದೇಶದ ಭಯಾನಕ ತಾಣವಾಗಿ ಎಂದು ಹೇಳಲಾಗುತ್ತಿದೆ.
- ಸೂಸೈಡ್ ಫಾರೆಸ್ಟ್, ಅಕಿಗಹರಾ : ಜಪಾನ್ ದೇಶದಲ್ಲಿರುವ ಅತ್ಯಂತ ಭಯಾನಕವಾದ ತಾಣಗಳಲ್ಲಿ ಈ ಆತ್ಮಹತ್ಯಾ ಅರಣ್ಯ ಅಥವಾ ಸೂಸೈಡ್ ಫಾರೆಸ್ಟ್ ಕೂಡ ಒಂದು. ಈ ಅರಣ್ಯವನ್ನು ಅಕಿಗಹರಾ ಎಂದು ಕರೆಯುತ್ತಾರೆ. ಈ ಅರಣ್ಯ ಪ್ರವೇಶವನ್ನು ಜಪಾನ್ ಸರ್ಕಾರವು ನಿರ್ಬಂಧಿಸಿದೆ. ಕಾಡಿನ ಹೊರಗೆ ಎಚ್ಚರಿಕೆಯ ಫಲಕವನ್ನು ಕೂಡ ಹಾಕಲಾಗಿದೆ.
ಇದನ್ನು ಮೀರಿ ಕಾಡಿನ ಒಳಗೆ ಪ್ರವೇಶ ಪಡೆದರೆ ಮತ್ತೆ ಹೊರಗೆ ಬರುವ ಯಾವುದೇ ಚಾನ್ಸ್ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಜಪಾನ್ ನ ಈ ಭಯಾನಕ ತಾಣದ ಬಗ್ಗೆ ಹಲವಾರು ದಂತಕಥೆಗಳನ್ನು ಹೊಂದಿದೆ. ಈ ತಾಣವು 1960 ರಿಂದ ಅತ್ಯಂತ ಭಯಾನಕವಾಗಿದ್ದು, ಸರಣಿ ಆತ್ಮಹತ್ಯೆಗೆ ಈ ತಾಣವು ಜನಪ್ರಿಯವಾಗಿದೆ. ವಿಶ್ವದ ಅತಿ ಹೆಚ್ಚು ಆತ್ಮಹತ್ಯೆ ನಡೆದ ಸ್ಥಳಗಳಲ್ಲಿ ಇದೂ ಒಂದು ಎನ್ನಲಾಗಿದೆ.
