Home » ಏಪ್ರಿಲ್ 1 ರಿಂದ ರಾಜ್ಯದ ಜನತೆಗೆ ಕಾದಿದೆಯಾ ವಿದ್ಯುತ್ ಶಾಕ್ !!? | ಕೆಇಆರ್​ಸಿ ಯಿಂದ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಣೆ

ಏಪ್ರಿಲ್ 1 ರಿಂದ ರಾಜ್ಯದ ಜನತೆಗೆ ಕಾದಿದೆಯಾ ವಿದ್ಯುತ್ ಶಾಕ್ !!? | ಕೆಇಆರ್​ಸಿ ಯಿಂದ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಣೆ

0 comments

ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮುಂದಾಗಿದ್ದು, ಸದ್ಯದಲ್ಲಿ ಈ ಕುರಿತು ಆದೇಶ ಹೊರಬೀಳಲಿದೆ.

ಕೆಇಆರ್​ಸಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ವಿದ್ಯುತ್ ನಿಯಂತ್ರಣ ಆಯೋಗವು ಫೆಬ್ರವರಿಯಲ್ಲಿ ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದೆ. ಅದರಿಂದ ಶೀಘ್ರದಲ್ಲೇ ಹೊಸ ವಿದ್ಯುತ್ ಪರಿಷ್ಕರಣೆ ದರ ಪಟ್ಟಿ ಬಿಡುಗಡೆ ಮಾಡಲಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೆಇಆರ್​ಸಿ ದರ ಪರಿಷ್ಕರಣೆ ಮಾಡುತ್ತದೆ.

ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆಗೆ ಒತ್ತಡ ಹೇರಿವೆ. ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳ ಹಿನ್ನಲೆ ದರ ಪರಿಷ್ಕರಣೆ ಪಟ್ಟು ಹಿಡಿದಿವೆ. ಬೆಸ್ಕಾಂ ಪ್ರತಿ ಯೂನಿಟ್ ಗೆ 1.50 ರೂ. ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ. ಕೆಇಆರ್​ಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

2022-23 ರ ಸಾಲಿನಲ್ಲಿ ಪ್ರತಿ ಯೂನಿಟ್ ಗೆ 35 ರಿಂದ 45 ಪೈಸೆ ಹೆಚ್ಚಳ ಸಾಧ್ಯತೆ ಇದೆ. ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

You may also like

Leave a Comment