Home » ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದು ಬಿದ್ದ ಮಂಗಳೂರು ಮಹಿಳೆ | ಕ್ಷಣಾರ್ಧದಲ್ಲೇ ಸಾವು!

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದು ಬಿದ್ದ ಮಂಗಳೂರು ಮಹಿಳೆ | ಕ್ಷಣಾರ್ಧದಲ್ಲೇ ಸಾವು!

0 comments

ಮಹಿಳೆಯೋರ್ವರು ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಅಚಾನಕ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮಂಗಳೂರು ಮೂಲದ 35 ವರ್ಷದ ವಿನಯ ಕುಮಾರಿ ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಯಾವಾಗಲೂ ಕೆಲಸಕ್ಕೆ ಹೊರಡುವ ಮೊದಲು ಜಿಮ್ ಗೆ ವರ್ಕೌಟ್ ಮಾಡಿ ಅನಂತರ ಕೆಲಸಕ್ಕೆ ತೆರಳುತ್ತಿದ್ದರು. ಸುಮಾರು ಎರಡು ವರ್ಷದಿಂದ ಅವರು ಜಿಮ್ ಗೆ ಹೋಗುತ್ತಿದ್ದರು.

ಇಂದು ಕೂಡಾ ಜಿಮ್ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಅವರ ಅರಿವಿಗೂ ಬಾರದಂತೆ ಹಿಂದಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಅವರನ್ನು ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆನೇ ನಿಧನರಾಗಿದ್ದಾರೆ‌ ಎಂದು ತಿಳಿದು ಬಂದಿದೆ.

You may also like

Leave a Comment