Home » ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ| ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ವ್ಯಾಸಂಗದ ಅವಧಿಯಲ್ಲಿ ಬದಲಾವಣೆ!

ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ| ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ವ್ಯಾಸಂಗದ ಅವಧಿಯಲ್ಲಿ ಬದಲಾವಣೆ!

0 comments

ಬೆಂಗಳೂರು :ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ ನೀಡಲಾಗಿದ್ದು, ಇದರ ಜೊತೆಯಲ್ಲೇ ಹಲವು ಕೋರ್ಸ್ ಗಳ ಅವಧಿಯಲ್ಲೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ವಿಸ್ತರಣೆ ಮಾಡಿದೆ.

ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಹೊಸ ಸ್ವರೂಪ ನೀಡಲಾಗಿದ್ದು, ಇದರ ಜೊತೆಯಲ್ಲೇ ಹಲವು ಕೋರ್ಸ್ ಗಳ ಅವಧಿಯಲ್ಲೂ ಮಾರ್ಪಾಟಾಗಿದೆ. ಎಂಸಿಎ ಕೋರ್ಸ್ ಅವಧಿ 2 ವರ್ಷ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ವ್ಯಾಸಂಗದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ 5 ವರ್ಷಗಳ ಅವಧಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಒಟ್ಟು 54 ಖಾಸಗಿ ಅನುದಾನಿತ ಬಿ.ಇಡಿ ಕಾಲೇಜಗಳಲ್ಲಿ236 ಹಾಗೂ ಆರು ಸರ್ಕಾರಿ ಬಿ.ಇಡಿ ಕಾಲೇಜುಗಳಲ್ಲಿ 33 ಬೋಧಕರ ಹುದ್ದೆಗಳು ಖಾಲಿ ಇದ್ದು, ಕ್ರಮೇಣ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

You may also like

Leave a Comment