Home » ಹೆಂಡತಿ ಹೇಳಿಕೆಯಿಂದ ಶಂಕ್ರಣ್ಣನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ !

ಹೆಂಡತಿ ಹೇಳಿಕೆಯಿಂದ ಶಂಕ್ರಣ್ಣನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ !

0 comments

ಶಂಕರಣ್ಣ ಹಾಗೂ ಮೇಘನಾ ಮದುವೆ 5 ತಿಂಗಳ ಹಿಂದೆ ಆಗಿದ್ದು, ಈ ಮದುವೆ ವಯಸ್ಸಿನ ಅಂತರದ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಏಕೆಂದರೆ ಶಂಕರಣ್ಣನಿಗೆ 45 ವರ್ಷ ಹಾಗೂ ಮೇಘನಾಳಿಗೆ 25 ವರ್ಷ ಆಗಿತ್ತು.

ಈಗ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ ಮತ್ತು ತಾಯಿಯ ಜಗಳದಿಂದ ಮನನೊಂದು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಹೆಂಡತಿ ಮೇಘನಾಳ ಪ್ರಕಾರ, ‘ ತಾಯಿಯೇ ಹೋಗಿ ನೇಣು ಹಾಕಿಕೋ ಅಂತ ಹೇಳಿದ್ದಕ್ಕೆ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಕೂಡಾ ಕೆಟ್ಟದಾಗಿ ಬೈದಿದ್ದರು. ನಾನು ಈಗ ನಾಲ್ಕು ತಿಂಗಳ ಪ್ರೆಗ್ನೆಂಟ್ ಎಂದು ಮೃತನ ಪತ್ನಿ ಮೇಘನಾ ಅಳಲು ತೋಡಿಕೊಂಡಿದ್ದಾರೆ.

You may also like

Leave a Comment