Home » ಚಾರ್ ಧಾಮ್ ಗೆ ಹೋಗಲು ಇಲ್ಲಿದೆ ಯಾತ್ರಿಕರಿಗೆ ಭರ್ಜರಿ ಅವಕಾಶ; ಪ್ಯಾಕೇಜ್ ನೀಡಿದ ಐಆರ್​ಸಿಟಿಸಿ

ಚಾರ್ ಧಾಮ್ ಗೆ ಹೋಗಲು ಇಲ್ಲಿದೆ ಯಾತ್ರಿಕರಿಗೆ ಭರ್ಜರಿ ಅವಕಾಶ; ಪ್ಯಾಕೇಜ್ ನೀಡಿದ ಐಆರ್​ಸಿಟಿಸಿ

0 comments

ಉತ್ತರಾಖಂಡದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಪ್ರವಾಸ ಹೊರಡುವ ಆಸೆ ಹೊಂದಿರುವವರಿಗೆ ಐಆರ್​ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದೆ. ರೇಲ್ವೆ ಇಲಾಖೆ ಚಾರ್ ಧಾಮ್ ಯಾತ್ರಾತಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಮೇ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆ ಕೈಗೊಳ್ಳುವರಿಗೆ ವಿಷೇಶ ರಿಯಾಯ್ತಿಯನ್ನು ಘೋಷಿಸಿದೆ. ಹಲವು ಅಗತ್ಯ ಸೌಲಭ್ಯಗಳಿರುವ ಟೂರ್ ಪ್ಯಾಕೇಜ್ ಅನ್ನು ನೀಡಲಾಗಿದೆ.

ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್ ಉಪಕ್ರಮಗಳ ಭಾಗವಾಗಿ ಐಆರ್​ಸಿಟಿಸಿ ಈ ಯೋಜನೆಯನ್ನು ಪರಚಯಿಸಿದೆ. ಮೇ 14ರಿಂದ ಆರಂಭವಾಗಿ ಮೇ 25ಕ್ಕೆ ಮುಕ್ತಾಯವಾಗಲಿದೆ ಈ ಯಾತ್ರೆ. 12 ಹಗಲು ಮತ್ತು 11 ರಾತ್ರಿಗಳ ಪ್ರವಾಸ ಪ್ಯಾಕೇಜ್ ಹೊಂದಿದೆ. ಹರಿದ್ವಾರ, ಬಾರ್​ಕೊಟ್, ಜಾನಕಿಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತಕಾಶಿ, ಸನ್​ಪ್ರಯಾಗ, ಕೇದಾರನಾಥ, ಬದರಿನಾಥ ಕ್ಷೇತ್ರಗಳನ್ನು ಸಂದರ್ಶಿಸಲಾಗುತ್ತದೆ. ನಾಗಪುರ ಮತ್ತು ದೆಹಲಿ ಮಾರ್ಗವಾಗಿ ವಾಯುಯಾನ ಟಿಕೆಟ್​ಗಳನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ.

ಒಬ್ಬರಿಗೆ 77,600 ಮತ್ತು ಇಬ್ಬರಿಗೆ 61,400 ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಪ್ರಯಾಣದರದೊಂದಿಗೆ ವಸತಿ, ಊಟೋಪಚಾರ ವೆಚ್ಚಗಳನ್ನೂ ಒಳಗೊಂದಿದೆ. ಹೆಚ್ಚಿನ ಮಾಹಿತಿಗೆ www.irctctourism.com ಜಾಲತಾಣ ನೋಡಿ.

You may also like

Leave a Comment