Home » ಕೊರಗಜ್ಜನ ದೈವಸ್ಥಾನದ ಮುಂದೆ ವ್ಯಕ್ತಿಯೋರ್ವನ ಅನುಮಾನಾಸ್ಪದ ಓಡಾಟ!

ಕೊರಗಜ್ಜನ ದೈವಸ್ಥಾನದ ಮುಂದೆ ವ್ಯಕ್ತಿಯೋರ್ವನ ಅನುಮಾನಾಸ್ಪದ ಓಡಾಟ!

by Mallika
0 comments

ಮಂಗಳೂರು ಇಲ್ಲಿನ ಶಿವನಗರದಲ್ಲಿರುವ ಕೊರಗಜ್ಜನ ದೈವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪಾಂಡೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿಕ್ಕ ಡಂಡರಗಲ್ ಗ್ರಾಮದ ಹನುಮಂತ ಎನ್. ತಟ್ಟಿ (25) ಎಂಬಾತನೇ ಬಂಧಿತ ಆರೋಪಿ.

ಎಸೈ ಅನಂತ ಮುರುಡೇಶ್ವರ್ ಅವರು ಸಿಬ್ಬಂದಿ ಪ್ರಕಾಶ್ ನಾಯ್ಕ ವಿ. ರೊಂದಿಗೆ ಗಸ್ತಿನಲ್ಲಿದ್ದ ವೇಳೆ ಹನುಮಂತ ತಟ್ಟಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದ. ಪೊಲೀಸರು ವಿಚಾರಿಸಿದಾಗ ಆತ ಉತ್ತರಿಸಲು ತಡಬಡಾಯಿಸಿದ್ದಾನೆ. ಈ ಹಿನ್ನೆಲೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

You may also like

Leave a Comment