ಈ ಒಂದು ವಿಶಿಷ್ಟ ಫೋಟೋ ನೋಡಿದರೆ ನಿಮಗೆ ಸಾವಿರಾರು ಕಲ್ಪನೆಗಳಿಗೆ ಹೋಗುತ್ತೀರಿ. ಏಕೆಂದರೆ ಈ ಫೋಟೋ ಅಂತಹ ಒಂದು ವಿಸ್ಮಯತೆಗೆ ನಮ್ಮನ್ನು ಕೊಂಡೊಯ್ಯುತ್ತೆ.
ಏಕೆಂದರೆ ಇದು ಸೃಷ್ಟಿಯ ಚಮತ್ಕಾರ. ಮಾರ್ಚ್ 30 ರಂದು ಹಂಚಿಕೊಂಡ ಟ್ವೀಟ್ ಇದುವರೆಗೆ 1,400 ಲೈಕ್‌ಗಳನ್ನು ಪಡೆದುಕೊಂಡಿದೆ.
“ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡುವ ಗೂಬೆ”. ಹೌದು ಚಿತ್ರ ಅದನ್ನೇ ಹೋಲುತ್ತದೆ.
ಗೂಬೆ ತನ್ನ ತುಪ್ಪಳವನ್ನು ಹೋಲುವ ಮರದ ತೊಗಟೆಯ ಮೇಲೆ ಧ್ಯಾನ ಮಾಡುತ್ತಿರುವಂತೆ ಕಣ್ಣು ಮುಚ್ಚಿ ಕುಳಿತಿರುವುದು ಕಂಡುಬರುತ್ತದೆ. ಗೂಬೆಯನ್ನು ಸಾಧಾರಣಕ್ಕೆ ಗುರುತಿಸಲು ಸಾಧ್ಯವಿಲ್ಲ.
ಈ ಫೋಟೋವನ್ನು ಪರಿಸರ ಪ್ರಿಯರು, ಪ್ರಾಣಿ ಪ್ರಿಯರು ತುಂಬು ಮನಸ್ಸಿನಿಂದ ಕೊಂಡಾಡಿದ್ದಾರೆ. ನಾವು ಈ ರೀತಿಯ ಫೋಟೋವನ್ನು ಹಿಂದೆಂದೂ ನೋಡಿಲ್ಲ ಎಂದು ಟ್ವಿಟ್ಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಿನಲ್ಲಿ ಅದ್ಭುತ ಪೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರೆಸ್ಪಾನ್ಸ್ ದೊರಕಿದೆ.
Meditating Owl, with its eyes closed, has a perfect camouflage that one can ever see… (Via Massimo) pic.twitter.com/7Mv7bgs45S