Home » ಒಂದೇ ಮನೆಯಲ್ಲಿ ಕಾಣಿಸಿಕೊಂಡ ಮೂರು ಬೃಹತ್ ಕಾಳಿಂಗ ಸರ್ಪಗಳು !! | ಒಂದು ಹಿತ್ತಲಲ್ಲಿ, ಎರಡು ಬಾವಿಯಲ್ಲಿ- ಬೆಚ್ಚಿಬಿದ್ದ ಮನೆಯವರು

ಒಂದೇ ಮನೆಯಲ್ಲಿ ಕಾಣಿಸಿಕೊಂಡ ಮೂರು ಬೃಹತ್ ಕಾಳಿಂಗ ಸರ್ಪಗಳು !! | ಒಂದು ಹಿತ್ತಲಲ್ಲಿ, ಎರಡು ಬಾವಿಯಲ್ಲಿ- ಬೆಚ್ಚಿಬಿದ್ದ ಮನೆಯವರು

0 comments

ಮನೆಯ ಸುತ್ತಮುತ್ತ ಯಾವುದಾದರೊಂದು ಹಾವು ಕಂಡರೆ ಭಯ ಬೀಳುವುದು ಸಹಜ. ಅದು ಅಲ್ಲಿಂದ ಬೇರೆಡೆಗೆ ಹೋಗುವವರೆಗೂ ನೆಮ್ಮದಿ ಇರುವುದಿಲ್ಲ. ಅಂಥದ್ದರಲ್ಲಿ ಇಲ್ಲೊಂದು ಕಡೆ ಒಂದೇ ದಿನ, ಒಂದೇ ಮನೆಯ ಬಳಿ ಮೂರು ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ.

ಉತ್ತರಕನ್ನಡ ಜಿಲ್ಲೆಯ ಕುಮಟಾದ ಅಚ್ಚಳ್ಳಿ ಹತ್ತಿರ ರಾಮನಾಥ ನಾಯ್ಕ ಎಂಬವರ ಮನೆಯ ಬಳಿ ಈ ಮೂರು ಕಾಳಿಂಗ ಸರ್ಪಗಳು ಕಂಡು ಬಂದಿವೆ. ಆ ಪೈಕಿ ಎರಡು ಬಾವಿಯೊಳಗಿದ್ದರೆ, ಇನ್ನೊಂದು ಹಿತ್ತಲಿನಲ್ಲಿ ಕಾಣಿಸಿಕೊಂಡಿತ್ತು.

ಒಟ್ಟೊಟ್ಟಿಗೆ ಮೂರು ಕಾಳಿಂಗ ಸರ್ಪಗಳನ್ನು ಕಂಡು ಆ ಮನೆಯವರಲ್ಲದೆ ಸುತ್ತಮುತ್ತಲ ಜನರು ಕಂಗಾಲಾಗಿದ್ದು, ರಕ್ಷಣೆಗಾಗಿ ಕೂಡಲೇ ಉರಗಪ್ರೇಮಿ ಪವನ್ ನಾಯ್ಕ ಎಂಬವರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು, ಬಾವಿಯಲ್ಲಿದ್ದ ಎರಡು ಮತ್ತು ಹಿತ್ತಲಿನಲ್ಲಿದ್ದ ಒಂದು ಸೇರಿ ಮೂರು ಕಾಳಿಂಗ ಸರ್ಪಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಸದ್ಯ ಮನೆಯವರು ಮತ್ತು ನೆರೆಹೊರೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ‌

You may also like

Leave a Comment