Home » ರಾಹುಲ್ ಗಾಂಧಿಗೆ ಆಸ್ತಿ ಬರೆದ ಮಹಿಳೆ ; ಇವರು ಯಾರು ? ಬರೆದಿದ್ದೇಕೆ ?

ರಾಹುಲ್ ಗಾಂಧಿಗೆ ಆಸ್ತಿ ಬರೆದ ಮಹಿಳೆ ; ಇವರು ಯಾರು ? ಬರೆದಿದ್ದೇಕೆ ?

0 comments

ಸಾಮಾನ್ಯವಾಗಿ ಆಸ್ತಿಯನ್ನು ಮಕ್ಕಳಿಗೆ ಅಥವಾ ಸಂಬಂಧಿಕರ ಹೆಸರಿಗೆ ಮಾಡುವುದು ಸಹಜ . ಆದರೆ‌ ಇಲ್ಲೊಬ್ಬ ಮಹಿಳೆ ತನ್ನ ಆಸ್ತಿಯನ್ನು ರಾಜಕೀಯ ಧುರೀಣಿರೊಬ್ಬರ ಹೆಸರಿಗೆ ಮಾಡಿದ್ದಾರೆ. ಸಾವಿನ ನಂತರ ತನ್ನ ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಒಬ್ಬ ಮಹಿಳೆ.

ಡೆಹ್ರಾಡೂನ್‌ನ ನೆಹರು ಕಾಲೋನಿಯ ದಲನ್‌ವಾಲಾ ನಿವಾಸಿ ಪುಷ್ಪಾ ಮುಂಜಿಯಾಲ್ ಎಂಬುವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ತಮ್ಮ ಆಸ್ತಿಯ ವಾರಸುದಾರರನ್ನಾಗಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿಯವರ ಆಲೋಚನೆಗಳಿಂದ ನಾನು ಪ್ರಭಾವಿತಳಾಗಿದ್ದೇನೆ  ಹಾಗಾಗಿ ತನ್ನ ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಕುಟುಂಬ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದೆ ಹಾಗಾಗಿ ನನ್ನ 50 ಲಕ್ಷ ರೂಪಾಯಿಗಳ ಸ್ಥಿರ ಠೇವಣಿ ಮತ್ತು 10 ಗ್ರಾಂ ಚಿನ್ನವನ್ನು ಹೊಂದಿದ್ದಾರೆ. ಈ ಆಸ್ತಿ ನನ್ನ ನಂತರ ರಾಹುಲ್ ಗಾಂಧಿಯವರಿಗೆ ಸಲ್ಲಲು ನ್ಯಾಯಾಲಯದಲ್ಲಿ ವಿಲ್ ಸಲ್ಲಿಸಿದ್ದಾರೆ.

You may also like

Leave a Comment