Home » ರಾತ್ರಿ ಬಸ್‌ನಲ್ಲಿ ಮಹಿಳೆಯ ಮೈ-ಕೈ ಸವರಿದ ಕಾಮುಕ : ಪಿನ್ ಚುಚ್ಚಿ ಠಾಣೆಗೆ ಕರೆದೊಯ್ದ ಗಟ್ಟಿಗಿತ್ತಿ

ರಾತ್ರಿ ಬಸ್‌ನಲ್ಲಿ ಮಹಿಳೆಯ ಮೈ-ಕೈ ಸವರಿದ ಕಾಮುಕ : ಪಿನ್ ಚುಚ್ಚಿ ಠಾಣೆಗೆ ಕರೆದೊಯ್ದ ಗಟ್ಟಿಗಿತ್ತಿ

by Praveen Chennavara
0 comments

ರಾತ್ರಿ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಕಿರುಕುಳ ನೀಡಿದ ಕಾಮುಕನಿಗೆ ಮಹಿಳೆಯೊಬ್ಬಳು ಸೇಫ್ಟಿ ಪಿನ್ ನಿಂದ ಚುಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಕೃಷ್ಣಗಿರಿಯ ನಿವಾಸಿ ರಾಘವನ್ ಎಂದು ಗುರುತಿಸಲಾಗಿದೆ.

ಘಟನೆ ವಿವರ : ಮದ್ರಾಸ್ ಹೈಕೋರ್ಟ್‌ನ ಮಹಿಳಾ ವಕೀಲೆಯೊಬ್ಬರು ಏಪ್ರಿಲ್ 1ರಂದು ರಾತ್ರಿ 10 ಗಂಟೆಗೆ ಚೆನ್ನೈನಿಂದ ವೆಲ್ಲೂರ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಆಸನಗಳ ನಡುವಿನ ಜಾಗದಲ್ಲಿ ಕೈ ಹಾಕಿ ಮೈ ಮುಟ್ಟಿದ್ದ ಎನ್ನಲಾಗಿದೆ.

ಆರಂಭದಲ್ಲಿ ವಕೀಲೆ ಅವನ ಕೈಯನ್ನು ಬಿಡಿಸಿ ಸುಮ್ಮನಾಗಿದ್ದಳು, ಆತ ಪದೇ ಪದೇ ಅದೇ ಚಾಳಿ ಮುಂದುವರಿಸಿದ್ದ.

ಮಹಿಳೆ ಪುರಾವೆಗಾಗಿ ತಕ್ಷಣ ಆತನ ಕೃತ್ಯದ ವಿಡಿಯೊವನ್ನು ರೆಕಾರ್ಡ್ ಮಾಡಿಕೊಂಡರು. ನಂತರ ತನ್ನ ಬಳಿ ಇದ್ದ ಸೇಫ್ಟಿ ಪಿನ್‌ನಿಂದ ಆತನಿಗೆ ಚುಚ್ಚಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.ಬಸ್ ನಲ್ಲಿ ಇದ್ದ ಪ್ರಯಾಣಿಕರು ಆತನನ್ನು ಕೆಳಗಿಳಿಸಿ ನಾವು ಹೋಗುವ ಎಂದರು.ಆದರೆ ವಕೀಲೆ ಮಾತ್ರ ಆತನಿಗೆ ತಕ್ಕ ಶಾಸ್ತ್ರೀ ಮಾಡಿಯೇ ತೀರುತ್ತೇನೆ ಎಂದು ಆತನನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ.ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

You may also like

Leave a Comment