Home » ದ್ವಿಚಕ್ರ ವಾಹನಕ್ಕೆ ಮಾರ್ಗಮಧ್ಯೆ ತಗುಲಿದ ವಿದ್ಯುತ್ ತಂತಿ!! ಬ್ಲಾಕ್ ಕಾಂಗ್ರೆಸ್ ಮುಖಂಡ ಸಾವು-ಸಹಸವಾರೆ ಅಪಾಯದಿಂದ ಪಾರು

ದ್ವಿಚಕ್ರ ವಾಹನಕ್ಕೆ ಮಾರ್ಗಮಧ್ಯೆ ತಗುಲಿದ ವಿದ್ಯುತ್ ತಂತಿ!! ಬ್ಲಾಕ್ ಕಾಂಗ್ರೆಸ್ ಮುಖಂಡ ಸಾವು-ಸಹಸವಾರೆ ಅಪಾಯದಿಂದ ಪಾರು

0 comments

ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಡಿದ ವಿದ್ಯುತ್ ತಂತಿ ಕಡಿದು ಕಾಂಗ್ರೆಸ್ ಮುಖಂಡರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮನಿಯಾಟ್ ಎಂಬಲ್ಲಿ ನಡೆದಿದ್ದು, ಅದೃಷ್ಟವಾಶಾತ್ ಸಾಹಸವಾರೆ ಮೃತರ ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ.

ಮೃತ ವ್ಯಕ್ತಿಯನ್ನು ಕಾಞ೦ಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ವಿ ಬಾಲಕೃಷ್ಣನ್ ಎಂದು ಗುರುತಿಸಲಾಗಿದೆ.
ಬಾಲಕೃಷ್ಣನ್ ಅವರು ತಮ್ಮ ಮೊಮ್ಮಗಳೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭ, ಆಗ ತಾನೇ ಗಾಳಿ ಮಳೆಗೆ ಮುರಿದು ಬಿದ್ದಿದ್ದ ವಿದ್ಯುತ್ ತಂತಿಯು ವಾಹನಕ್ಕೆ ತಗುಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಜೊತೆಗಿದ್ದ ಮೊಮ್ಮಗಳು ಅದೃಷ್ಟವಾಶಾತ್ ಯಾವುದೇ ಅಪಾಯ ಸಂಭವಿಸದೆ ಪಾರಗಿದ್ದಾಳೆ ಎಂದು ತಿಳಿದುಬಂದಿದೆ.

You may also like

Leave a Comment