Home » ರಾಜ್ಯ ಸರಕಾರದಿಂದ ‘ಅಕ್ಷರ ದಾಸೋಹ ಯೋಜನೆ’ಯ ‘ಬಿಸಿಯೂಟ ತಯಾರಕರು, ಸಹಾಯಕ’ರಿಗೆ ಭರ್ಜರಿ ಸಿಹಿಸುದ್ದಿ! ‘ಗೌರವ ಧನ ಹೆಚ್ಚಿಸಿ ಆದೇಶ

ರಾಜ್ಯ ಸರಕಾರದಿಂದ ‘ಅಕ್ಷರ ದಾಸೋಹ ಯೋಜನೆ’ಯ ‘ಬಿಸಿಯೂಟ ತಯಾರಕರು, ಸಹಾಯಕ’ರಿಗೆ ಭರ್ಜರಿ ಸಿಹಿಸುದ್ದಿ! ‘ಗೌರವ ಧನ ಹೆಚ್ಚಿಸಿ ಆದೇಶ

by Mallika
0 comments

ರಾಜ್ಯ ಸರ್ಕಾರ ಅಡುಗೆ ತಯಾರಕರು, ಸಹಾಯಕರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವಂತ ಬಿಸಿಯೂಟ ತಯಾರಕರು, ಸಹಾಯಕರಿಗೆ ಗೌರವ ಧನ ಹೆಚ್ಚಿಸೋದಾಗಿ ಘೋಷಣೆ ಮಾಡಿದ್ದರು. ಹಾಗಾಗಿ ರಾಜ್ಯ ಸರಕಾರ ಗೌರವ ಧನ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಮುಖ್ಯ ಅಡುಗೆಯವರಿಗೆ ಮಾಸಿಕ ರೂ.3,700 ಹಾಗೂ ಸಹಾಯಕ ಅಡುಗೆಯವರಿಗೆ ಮಾಸಿಕ ರೂ.3,600 ಗೌರವ ಸಂಭಾವನೆಯನ್ನು ಪಾವತಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಅನುಮತಿ ನೀಡಿದೆ.

ಮಧ್ಯಾಹ್ನ ಉಪಹಾರ ಯೋಜನೆಯಡಿ
ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರ ಮಾಸಿಕ ಸಂಭಾವನೆಯನ್ನು ನೇರ ಸೌಲಭ್ಯ ವರ್ಗಾವಣೆ ವೇದಿಕೆ ಮೂಲಕ ಪಾವತಿಸುವಂತೆ ತಿಳಿಸಲಾಗಿದೆ.

You may also like

Leave a Comment