Home » ಮಂಗಳೂರು : ಪತ್ನಿಯ ಅನಾರೋಗ್ಯ ಕಾರಣ| ಖಿನ್ನತೆಗೊಳಗಾದ ಪತಿ ನೇಣಿಗೆ ಶರಣು ;

ಮಂಗಳೂರು : ಪತ್ನಿಯ ಅನಾರೋಗ್ಯ ಕಾರಣ| ಖಿನ್ನತೆಗೊಳಗಾದ ಪತಿ ನೇಣಿಗೆ ಶರಣು ;

by Mallika
0 comments

ಉಳ್ಳಾಲ : ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದುದರಿಂದ ಮನನೊಂದ ಪತಿಯೋರ್ವ ಖಿನ್ನತೆಗೊಳಗಾಗಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆಯೊಂದು ಉಳ್ಳಾಲ ಸೀ ಗ್ರೌಂಡ್ ಎಂಬಲ್ಲಿ ನಡೆದಿದೆ.

ಉಳ್ಳಾಲ ಬಂಡಿಕೊಟ್ಯ ನಿವಾಸಿ ಅಶ್ವಥ್ ಪುತ್ರನ್ (49) ಆತ್ಮಹತ್ಯೆಗೈದ ದುರ್ದೈವಿ.

ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಸಹಿಸದ ಆಶ್ವಥ್ ಅವರು ಖಿನ್ನತೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಅಶ್ವಥ್ ಅವರು ಆಸ್ಪತ್ರೆಯಿಂದ ಹೊರಬಂದ ಬಳಿಕ ಖಿನ್ನರಾಗಿಯೇ ಇದ್ದರು. ಇಂದು ಸಂಜೆ ಉಳ್ಳಾಲದ ಸೀ ಗ್ರೌಂಡ್ ಎಂಬಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಅಶ್ವಥ್ ಅವರು ಮಂಗಳೂರು ವಿವಿ ಮಟ್ಟದಲ್ಲಿ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರರಾಗಿದ್ದರು. ಅವರಿಗೆ ಇಬ್ಬರು ಎಳೆ ಪ್ರಾಯದ ಪುತ್ರರಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment