Home » ಉಪ್ಪಿನಂಗಡಿ:ಕಣ್ಣಿಗೆ ಬಟ್ಟೆ ಕಟ್ಟಿ ನೇತ್ರಾವತಿ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ!

ಉಪ್ಪಿನಂಗಡಿ:ಕಣ್ಣಿಗೆ ಬಟ್ಟೆ ಕಟ್ಟಿ ನೇತ್ರಾವತಿ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ!

0 comments

ಉಪ್ಪಿನಂಗಡಿ:ವ್ಯಕ್ತಿಯೋರ್ವ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಜೆ
ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಗದಗ ನಿವಾಸಿ ಭರಮಪ್ಪ (31) ಎಂದು ಗುರುತಿಸಲಾಗಿದೆ.

ಮೃತ ಭರಮಪ್ಪ,ನಿನ್ನೆ ಕೂಲಿ ಕೆಲಸಕ್ಕೆಂದು ಹೋಗಿ, ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಮಾಹಿತಿ ತಿಳಿದ ಸ್ಥಳೀಯ ಯುವಕರಾದ ಇಸುಬು, ನವಾಝ್ ,ಪಯಾಝ್ ಸೇರಿ ಹಲವರು ತಕ್ಷಣ ರಕ್ಷಣೆಗೆ ಧಾವಿಸಿದರೂ,ಈ ವೇಳೆ ಭರಮಪ್ಪ ಮೃತಪಟ್ಟಿದ್ದರು.

ಇವರು ಕೂಲಿ ಕಾರ್ಮಿಕರಾಗಿದ್ದು, ಕುಟುಂಬದ ಜೊತೆ ಸರಳೀಕಟ್ಟೆಯ ಮೂಡಡ್ಕ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ಇದೀಗ ಇವರ ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment