Home » ತಹಶೀಲ್ದಾರ್ ಕಾಲು ಹಿಡಿದು ಗೋಗೆರೆದ ಅನ್ನದಾತ| ಸರಕಾರಿ ಕಚೇರಿಗೆ ಅಲೆದಾಡಿ ಸೋತು ಹೋದ ರೈತ!

ತಹಶೀಲ್ದಾರ್ ಕಾಲು ಹಿಡಿದು ಗೋಗೆರೆದ ಅನ್ನದಾತ| ಸರಕಾರಿ ಕಚೇರಿಗೆ ಅಲೆದಾಡಿ ಸೋತು ಹೋದ ರೈತ!

by Mallika
0 comments

ಜಮೀನಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯದ ಕಾರಣಕ್ಕೆ ರೈತರೊಬ್ಬರು ಗೋಗೆರದು ಕಣ್ಣೀರಿಟ್ಟು‌ ಕಡೆಗೆ ತಹಶೀಲ್ದಾರ್ ಅವರ ಕಾಲು ಹಿಡಿದು ಗೋಗರೆದ ಘಟನೆಯೊಂದು ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಈ ಮನಕಲಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ನಾಗವಲ್ಲಿಯ ರೈತ ಮುನಿಯಪ್ಪ ಹಲವು ವರ್ಷಗಳಿಂದ ಅನುಭವದಲ್ಲಿದ್ದ ಜಮೀನಿಗೆ ಸಾಗುವಳಿ ಪತ್ರ ಪಡೆದಿದ್ದರು. ಆ ಸಾಗುವಳಿ ಪತ್ರದಲ್ಲಿನ ದೋಷಗಳನ್ನು ಸರಿಪಡಿಸುವಂತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದರು.

ತಾಲ್ಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮುನಿಯಪ್ಪ ಅವರ ಸಮಸ್ಯೆಗೆ ಸ್ಪಂದಿಸಿದೆ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ರೋಸಿಹೋದ ರೈತ ತನಗೆ ನ್ಯಾಯ ಕೊಡಿಸುವಂತೆ ತಹಶೀಲ್ದಾರ್ ಕಾಲಿಗೆ ಬಿದ್ದು ಅಂಗಲಾಚಿದ್ದಾರೆ.

ಸದ್ಯ ಎಲ್ಲ ಕಡೆ ಈ ದೃಶ್ಯ ಹರಿದಾಡುತ್ತಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

You may also like

Leave a Comment