Home » LPG ಸಿಲಿಂಡರ್‌ನಲ್ಲಿ 50 ಲೀ. ಮದ್ಯ ಸಾಗಾಟ !! | ಚಾಲಾಕಿ ಕಳ್ಳನನ್ನು ಹೆಡೆಮುರಿಕಟ್ಟಿದ ಪೊಲೀಸರು

LPG ಸಿಲಿಂಡರ್‌ನಲ್ಲಿ 50 ಲೀ. ಮದ್ಯ ಸಾಗಾಟ !! | ಚಾಲಾಕಿ ಕಳ್ಳನನ್ನು ಹೆಡೆಮುರಿಕಟ್ಟಿದ ಪೊಲೀಸರು

0 comments

ಕಳ್ಳರು ಯಾವ ರೀತಿಯಲ್ಲೆಲ್ಲಾ ಕಳ್ಳ ಮಾಲುಗಳನ್ನು ಸಾಗಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಅಂತೆಯೇ ಇಲ್ಲಿ LPG ಸಿಲಿಂಡರ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ಚಾಲಾಕಿಯೊಬ್ಬನನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

ಭೂಷಣ್ ರೈ ಬಂಧಿತ ಆರೋಪಿ. ಮದ್ಯ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಂದಘಾಟ್ ಸಮೀಪ ದಾಳಿ ನಡೆಸಿ, ಸಿಲಿಂಡರ್‌ನಲ್ಲಿದ್ದ 50 ಲೀ. ಮದ್ಯವನ್ನು ಜಪ್ತಿ ಮಾಡಿದ್ದಾರೆ.

ವ್ಯಕ್ತಿಯು ಬಿಹಾರದ ಅಬಕಾರಿ ತಿದ್ದುಪಡಿ-2022ರ ಅಡಿಯಲ್ಲಿ ದಂಡ ಪಾವತಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ನಿಯಮ ಉಲ್ಲಂಘಿಸಿದವರಿಗೆ ಒಂದು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

You may also like

Leave a Comment