Home » ಡಿಪೋ ಮ್ಯಾನೇಜರ್ ಕಿರುಕುಳ ಹಿನ್ನೆಲೆ!! ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ನೇಣಿಗೆ ಶರಣು!!

ಡಿಪೋ ಮ್ಯಾನೇಜರ್ ಕಿರುಕುಳ ಹಿನ್ನೆಲೆ!! ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ನೇಣಿಗೆ ಶರಣು!!

0 comments

ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕನೋರ್ವ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಬಸ್ ಡಿಪೋದಲ್ಲಿ ನಡೆದಿದೆ. ಮೃತ ಚಾಲಕನನ್ನು ಶಶಿಧರ್ ಎಂದು ಗುರುತಿಸಲಾಗಿದೆ.

ಮೃತ ಶಶಿಧರ್ ಚಾಲಕ ಕಂ ಕಂಡಕ್ಟರ್ ಕೆಲಸ ನಿರ್ವಹಿಸುತ್ತಿದ್ದು,ಕಳೆದ ಕೆಲ ದಿನಗಳಿಂದ ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆಯು ತಡವಾಗಿ ಡಿಪೋ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment