Home » ಮನೆಗೆ ಬಂದ ವಿದ್ಯಾರ್ಥಿನಿಗೆ ಜ್ಯೂಸ್ ನೀಡಿದ ಸಹಪಾಠಿ ವಿದ್ಯಾರ್ಥಿ!! ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬೆಳಕಿಗೆ ಬಂತು ಕಾಮುಕ ಕೃತ್ಯ!?

ಮನೆಗೆ ಬಂದ ವಿದ್ಯಾರ್ಥಿನಿಗೆ ಜ್ಯೂಸ್ ನೀಡಿದ ಸಹಪಾಠಿ ವಿದ್ಯಾರ್ಥಿ!! ನಗ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಬೆಳಕಿಗೆ ಬಂತು ಕಾಮುಕ ಕೃತ್ಯ!?

0 comments

ಪ್ರಕಾಶಂ: ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಮನೆಗೆ ಕರೆಸಿಕೊಂಡು, ಆಕೆಗೆ ಮತ್ತು ಬರುವ ಪಾನೀಯ ನೀಡಿ ಆಕೆಯ ನಗ್ನ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಗಂಭೀರ ಪ್ರಕರಣವೊಂದು ಪೆದ್ದದೊರ್ನಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕೃತ್ಯ ಎಸಗಿದ ಆರೋಪಿಯನ್ನು ದೂದೆಕುಲ ನಾಗೊರ್ ಮೀರಾವಲಿ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಮಿರಾಕುಲಿ ಡಿಪ್ಲೋಮ ವಿದ್ಯಾರ್ಥಿಯಾಗಿದ್ದು, ಸ್ನೇಹಿತೆಯ ಮನೆಗೆಂದು ತನ್ನ ಗ್ರಾಮಕ್ಕೆ ಬಂದಿದ್ದ ಸಹಪಾಠಿ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಹೀಗೆ ಮನೆಗೆ ಬಂದ ಆಕೆಗೆ ತಂಪು ಪಾನೀಯವನ್ನು ನೀಡಿದ್ದು, ಅದರಲ್ಲಿ ಪ್ರಜ್ಞೆ ತಪ್ಪುವ ಮಾತ್ರೆಯನ್ನು ಕಲಸಿದ್ದ ಪರಿಣಾಮ ಆಕೆ ಮೂರ್ಛೆ ಹೋಗಿದ್ದಳು.

ಈ ವೇಳೆ ತನ್ನ ಇನ್ನೊಬ್ಬ ಗೆಳೆಯ ರಸೂಲ್ ಎಂಬಾತನನ್ನು ಫೋನ್ ಮಾಡಿ ಮನೆಗೆ ಬರಹೇಳಿದ್ದು, ಇಬ್ಬರೂ ಸೇರಿ ವಿದ್ಯಾರ್ಥಿನಿಯ ಬಟ್ಟೆ ತೆಗೆದು ನಗ್ನ ಚಿತ್ರಗಳನ್ನು ಸೆರೆಹಿಡಿದಿದ್ದರು. ಬಳಿಕ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕೂಡಲೇ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment