Home » ಕಾರು ಅಪಘಾತ: ಗಾಯಾಳುವಿಗೆ ತನ್ನ ಕಾರು ಕೊಟ್ಟು ಮಾನವೀಯತೆ ಮೆರೆದ ಸಚಿವೆ ಶೋಭಾ ಕರಂದ್ಲಾಜೆ;

ಕಾರು ಅಪಘಾತ: ಗಾಯಾಳುವಿಗೆ ತನ್ನ ಕಾರು ಕೊಟ್ಟು ಮಾನವೀಯತೆ ಮೆರೆದ ಸಚಿವೆ ಶೋಭಾ ಕರಂದ್ಲಾಜೆ;

by Mallika
0 comments

ದಾರಿ ಮಧ್ಯದಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಮಾನವೀಯ ನೆಲೆಯಿಂದ ಸ್ಪಂದಿಸಿದ್ದಾರೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಣಿಯಲ್ಲಿ ಭಾಗವಹಿಸಲು ತೆರಳುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.

ಹೊಸಪೇಟೆ ಗ್ರಾಮೀಣ ಭಾಗದ ಹೊರವಲಯದಲ್ಲಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಿ ಉದಾರತೆಯನ್ನು ಮೆರೆದಿದ್ದಾರೆ.

ಅಪಘಾತಕ್ಕೀಡಾಗಿ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ಸೇರಿಸಲು ತಮ್ಮ ವಾಹನವನ್ನು ನೀಡಿ, ಕಾರ್ಯಕಾರಣಿ ನಡೆಯುವ ಸ್ಥಳಕ್ಕೆ ಸುಮಾರು 5 ಕಿ. ಮೀ ನಷ್ಟು ದೂರ ಬೈಕಿನ ಮೂಲಕ ತೆರಳಿ ಮಾನವೀಯತೆಯನ್ನು ಮೆರೆದಿರುತ್ತಾರೆ. ಕೇಂದ್ರ ಸಚಿವರ ಈ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like

Leave a Comment