Home » ಪ್ರಿಯಕರನ ಜತೆ ಸೆಕ್ಸ್ ಮಾಡುವಾಗ ಸಿಕ್ಕಿ ಬಿದ್ದ ಮಹಿಳೆ | ಪತಿಯ ಗುಪ್ತಾಂಗ ಹಿಚುಕಿ ಕೊಲ್ಲಲು ಯತ್ನಿಸಿದ ಪತ್ನಿ

ಪ್ರಿಯಕರನ ಜತೆ ಸೆಕ್ಸ್ ಮಾಡುವಾಗ ಸಿಕ್ಕಿ ಬಿದ್ದ ಮಹಿಳೆ | ಪತಿಯ ಗುಪ್ತಾಂಗ ಹಿಚುಕಿ ಕೊಲ್ಲಲು ಯತ್ನಿಸಿದ ಪತ್ನಿ

by Praveen Chennavara
0 comments

ಬೆಂಗಳೂರು : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯೊಡನೆ ಮಾತಿನ ಚಕಮಕಿ ನಡೆದು ಪ್ರಿಯಕರನ ಜೊತೆ ಗೂಡಿ ಪತಿಯ ಗುಪ್ತಾಂಗ ಹಿಸುಕಿ ಸಾಯಿಸಲು ಯತ್ನಿಸಿದ ಆರೋಪದಡಿಯಲ್ಲಿ ಪತ್ನಿ ಮತ್ತು ಪ್ರಿಯಕರ ಜೈಲು ಸೇರಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದ ವೀರಭದ್ರ ಅವರ ಮರ್ಮಾಂಗ ಹಿಸುಕಿ ಸಾಯಿಸುವ ಯತ್ನ ನಡೆಸಿದ ಆರೋಪದಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ಅಭಿಲಾಶ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆಕೆ ಕೇರಳ ಮೂಲದ ಅಭಿಲಾಶ್‌ ಎಂಬ ವ್ಯಕ್ತಿಯೊಡನೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದರೆಂದು ಪತಿ ವೀರಭದ್ರ ಅವರಿಗೆ ಅನುಮಾನ ಇತ್ತು.

ಅದರಂತೆಯೇ ಮದ್ಯ ಸೇವಿಸಿದ ಪತಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕೇರಳ ಮೂಲದ ಪ್ರಿಯಕರ ಅಭಿಲಾಶ್‌ ವೀರಭದ್ರನ ಮನೆಯಲ್ಲಿ ಪತ್ನಿಯೊಡನಿದ್ದ, ಈ ವೇಳೆ ಎಚ್ಚರಗೊಂಡ ಪತಿ, ಪತ್ನಿ ಪ್ರಿಯಕರನೊಡನೆ ದೃಶ್ಯಕಂಡು ಕೆಂಡಾಮಂಡಲನಾಗಿದ್ದಾನೆ. ಮೂವರ ನಡುವೆ ಮಾತಿನ ವಾಗ್ಧಾಳಿ ನಡೆಯುತ್ತಿದ್ದಂತೆಯೇ ಪ್ರಿಯಕರನೊಡಗೂಡಿದ ಪತ್ನಿ ಪತಿಯ ಮರ್ಮಾಂಗ ಹಿಸುಕಿ ಸಾಯಿಸಲು ಚಡ್ಡಿಯ ಒಳಕ್ಕೆ ಕೈ ಹಾಕಿದ್ದಾರೆ. ಆ ಸಂದರ್ಭ ಕೊಸರಿಕೊಂಡ ಗಂಡ ಜೋರಾಗಿ ಚೀರಾಟ ನಡೆಸಿದ್ದಾನೆ. ಆಗ ಕೂಗಾಟ ಆಲಿಸಿ ಮನೆಯಲ್ಲಿದ್ದ ಮಕ್ಕಳು ಮತ್ತು ನೆರೆಹೊರೆಯವರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಘಟನೆ ಕುರಿತು ಪತಿ ವೀರಭದ್ರ ಎಚ್‌.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

You may also like

Leave a Comment