Home » ಆರ್.ಸಿ.ಬಿ. ಅಂಗಳದಲ್ಲಿ ಕೆಜಿಎಫ್2 ಸಿನಿಮಾ; ಆಟಗಾರರ ಸಿನಿಮಾ ನೋಟ

ಆರ್.ಸಿ.ಬಿ. ಅಂಗಳದಲ್ಲಿ ಕೆಜಿಎಫ್2 ಸಿನಿಮಾ; ಆಟಗಾರರ ಸಿನಿಮಾ ನೋಟ

0 comments

ಕನ್ನಡ ಚಿತ್ರರಂಗದ ಬೃಹತ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜತೆ ಕೈಜೋಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಇದೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಚಾರವನ್ನು ಕೂಡ ಇತ್ತೀಚೆಗಷ್ಟೇ ಮಾಡಿದ್ದರು. ಚಿತ್ರದ ಟೀಸರ್ ದೃಶ್ಯಗಳಿಗೆ ನಟಿಸುವುದರ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ತಮ್ಮ ಪ್ರೋತ್ಸಾಹ ನೀಡಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಕನ್ನಡಿಗರು ನಿರ್ಮಿಸಿರುವ ಚಿತ್ರವನ್ನು ವೀಕ್ಷಿಸಿದ್ದಾರೆ. ತಂಡದ ಆಟಗಾರರಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಆಟಗಾರರು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನಿನ್ನೆ ( ಏಪ್ರಿಲ್ 17 ) ಬಯೋ ಬಬಲ್ ಒಳಗಡೆಯೇ ವೀಕ್ಷಿಸಿದ್ದಾರೆ.

ಪಾಮ್ ಗಾರ್ಡನ್‌ನಲ್ಲಿ ವೇದಿಕೆಯ ಮೇಲೆ ತೆರೆಯನ್ನು ಹಾಕಲಾಗಿತ್ತು, ತಂಡದ ಆಟಗಾರರು ಕುಳಿತು ಚಿತ್ರವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವಿಷಯವನ್ನು ಸ್ವತಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ತಿಳಿಸಿದೆ.

You may also like

Leave a Comment