Home » ಹಿರಿಯ ಪತ್ರಕರ್ತ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಮಹೇಶ್ವರನ್ ನಿಧನ

ಹಿರಿಯ ಪತ್ರಕರ್ತ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಮಹೇಶ್ವರನ್ ನಿಧನ

0 comments

ಹಿರಿಯ ಪತ್ರಕರ್ತ, ಕ್ರೀಡಾಪಟು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿ.ಮಹೇಶ್ವರನ್ (64) ಮಂಗಳವಾರ ರಾತ್ರಿ ಮೈಸೂರಿನ ಕೆ.ಸಿ.ಲೇಔಟ್‌ನಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ನರಳುತ್ತಿದ್ದ ಅವರು ಕೆಲ ಕಾಲದಿಂದ ತೀವ್ರ ಅಸ್ವಸ್ಥರಾಗಿದ್ದರು. ಕನ್ನಡದ ಅತ್ಯಂತ ಹಳೆಯ ಪತ್ರಿಕೆ ‘ಸಾಧಿ’ಯ ಸಂಪಾದಕರಾಗಿದ್ದರು. ಅತ್ಯುತ್ತಮ ಕ್ರೀಡಾಪಟುವಾಗಿದ್ದ ಮಹೇಶ್ವರನ್, ಬೆಂಗಳೂರು ಜಯನಗರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಾಳೆ ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಹೇಶ್ವರನ್ ಅವರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

You may also like

Leave a Comment