ಶ್ರೀರಾಮ ಯಾರೆಂಬುದೇ ಗೊತ್ತಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದೆಯೊಬ್ಬರು ಭಾರೀ ಟೀಕೆಗೆ ಗುರಿಯಾಗಿದ್ದಾರೆ.
‘ನಮ್ಮ ರಾಜ್ಯದ ಯಾರೊಬ್ಬರಿಗೂ ಶ್ರೀರಾಮ ಯಾರೆಂಬುದೇ ಗೊತ್ತೇ ಇಲ್ಲ’ ಎನ್ನುವ ಮೂಲಕ ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಜ್ಯೋತಿಮಣಿ ಅವರು ಈ ಹೇಳಿಕೆ ನೀಡಿದ್ದಾರೆ. ನಾನು ತಮಿಳುನಾಡು ಮೂಲದವಳು. ನನಗೆ ರಾಮ ಯಾರೆಂಬುದು ಗೊತ್ತಿಲ್ಲ. ತಮಿಳುನಾಡಿನಲ್ಲಿ ನೀವು ಯಾರನ್ನೇ ಕೇಳಿ ಅವರು ಕೂಡ ಇದೇ ಮಾತನ್ನು ಹೇಳುತ್ತಾರೆ. ನಾವು ಯಾವುದೇ ರಾಮ ದೇವಸ್ಥಾನವನ್ನು ನೋಡಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.
I’m from Tamil Nadu, I don’t know Ram
You ask anybody in Tamil Nadu We don’t see any Ram Temple