Home » ಕುಂದಾಪುರ: ಕೋಡಿ ಬೀಚ್‌ನಲ್ಲಿ ಸಮುದ್ರಕ್ಕಿಳಿದ ಮೂವರು ಯುವಕರು| ಜೀವದ ಹಂಗು ತೊರೆದು ರಕ್ಷಿಸಿದ ಮೀನುಗಾರರು!!!

ಕುಂದಾಪುರ: ಕೋಡಿ ಬೀಚ್‌ನಲ್ಲಿ ಸಮುದ್ರಕ್ಕಿಳಿದ ಮೂವರು ಯುವಕರು| ಜೀವದ ಹಂಗು ತೊರೆದು ರಕ್ಷಿಸಿದ ಮೀನುಗಾರರು!!!

by Mallika
0 comments

ಕುಂದಾಪುರ: ಬೆಂಗಳೂರು ಮೂಲದ ಮೂವರು
ಯುವಕರು ಪ್ರವಾಸಕ್ಕೆಂದು ಕುಂದಾಪುರದ ಕೋಡಿ
ಬೀಚ್ ಗೆ ಆಗಮಿಸಿದ್ದು, ಈಜಾಡಲು ಸಮುದ್ರಕ್ಕೆ ಇಳಿದಾಗ, ಕಡಲ ಪಾಲಾಗುವುದನ್ನು ಸ್ಥಳೀಯರು ತಡೆದಿದ್ದು ಸಮುದ್ರಕ್ಕೆ ಜಿಗಿದು ಮೂವರನ್ನು ರಕ್ಷಿಸಿದ್ದಾರೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಬೀಚ್ ಗೆ ಬಂದವರು ಕಡಲಿಗೆ ಇಳಿದಿದ್ದು ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿಸ ಸ್ಥಳೀಯರು ಮತ್ತು ಮೀನುಗಾರರು ಕಡಲಿಗೆ ಜಿಗಿದು ಅವರನ್ನು ದಡ ಸೇರಿಸಿದ್ದಾರೆ.

ಮೀನುಗಾರರಾದ ಸಂಜೀವ ಖಾರ್ವೀ ಹಾಗೂ ಅಶೋಕ ಖಾರ್ವೀ ಯುವಕರನ್ನು ರಕ್ಷಿಸಲು ಜೀವದ ಹಂಗು ತೊರೆದು ಕಡಲಿಗೆ ಧುಮುಕಿ ಯುವಕರ ಜೀವ ರಕ್ಷಣೆ ಮಾಡಿದ್ದಾರೆ.

You may also like

Leave a Comment