Home » ಬೇಟೆ ಮಾಡಲೆಂದು ಕಾಡಿಗೆ ಹೋದ ವ್ಯಕ್ತಿಯೇ ಗುಂಡೇಟಿಗೆ ಸಾವು|ಸ್ನೇಹಿತರು ಪೊಲೀಸರ ವಶಕ್ಕೆ!

ಬೇಟೆ ಮಾಡಲೆಂದು ಕಾಡಿಗೆ ಹೋದ ವ್ಯಕ್ತಿಯೇ ಗುಂಡೇಟಿಗೆ ಸಾವು|ಸ್ನೇಹಿತರು ಪೊಲೀಸರ ವಶಕ್ಕೆ!

0 comments

ಬೇಟೆಗೆಂದು ಕಾಡಿಗೆ ಹೋದ ವ್ಯಕ್ತಿಯೋರ್ವ ತಾನೇ ಗುಂಡೇಟಿಗೆ ಬಲಿಯಾದ ಘಟನೆಯೊಂದು ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ವೀರಾಜಪೇಟೆ ತಾಲೂಕಿನ ಗುಂಡಿಗೆರೆ ನಿವಾಸಿಯಾದ ಹಮೀದ್ (35) ಎಂಬುವವರೇ ಗುಂಡೇಟಿಗೆ ಬಲಿಯಾದ ವ್ಯಕ್ತಿ. ಹಮೀದ್ ಅವರಿಗೆ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಹಮೀದ್ ಸೇರಿದಂತೆ ಮೂವರು ಹೆಗ್ಗಳ ಗ್ರಾಮದ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ತೆರಳಿದ್ದರು. ಈ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಜೊತೆಯಲ್ಲಿ ತೆರಳಿದ್ದ ಅಶ್ರಫ್ ಹಾಗೂ ರಫೀಕ್ ಪೊಲೀಸರಿಗೆ ಶರಣಾಗಿದ್ದಾರೆ. ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇನ್ನೂ ಬೇಟೆಗೆ ಹೋದವರಲ್ಲಿ ಇನ್ನಷ್ಟು ಜನರು ಇದ್ದಾರೆ.ಈ ಬಗ್ಗೆ ತನಿಖೆ ಆಗಬೇಕೆಂದು ಸಂಬಂಧಿಕರ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕೊಡಗು ಎಸ್ಪಿ ಎಂ.ಅಯ್ಯಪ್ಪ ಭೇಟಿ ನೀಡಿದ್ದಾರೆ.

You may also like

Leave a Comment