Home » ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಗೆ ಯುವಕನಿಂದ ಹಲ್ಲೆ!! ಆರೋಪಿ ಮುಸ್ಲಿಂ ಮುಖಂಡನ ಮಗನೆಂಬ ಕಾರಣಕ್ಕೆ ಬಂಧಿಸಲು ಪೊಲೀಸರಿಂದ ವಿಳಂಬ ಆರೋಪ!!

ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಗೆ ಯುವಕನಿಂದ ಹಲ್ಲೆ!! ಆರೋಪಿ ಮುಸ್ಲಿಂ ಮುಖಂಡನ ಮಗನೆಂಬ ಕಾರಣಕ್ಕೆ ಬಂಧಿಸಲು ಪೊಲೀಸರಿಂದ ವಿಳಂಬ ಆರೋಪ!!

0 comments

ತಮ್ಮ ವಾಹನವನ್ನು ಅಪಾಯಕಾರಿಯಾಗಿ ಓವರ್ ಟೇಕ್ ಮಾಡಿದ್ದನ್ನು ಪ್ರಶ್ನಿಸಿದ ಯುವತಿಯರಿಬ್ಬರಿಗೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ಕೇರಳದ ಪಣಂಬ್ರಾದಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಮುಸ್ಲಿಂ ಲೀಗ್ ಮುಖಂಡನ ಮಗನೆನ್ನಲಾದ ಶಬೀರ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಅಸ್ನಾ ಅಜಿಜ್ ಮತ್ತು ಹಮ್ಮಾ ಅಜೀಜ್ ಎಂಬಿಬ್ಬರು ಸಹೋದರಿಯರು ಕೋಯಿಕ್ಕೋಡ್ ನಿಂದ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ಕಾರಿನಲ್ಲಿದ್ದ ಯುವಕ ಅಪಾಯಕಾರಿಯಾಗಿ ಸ್ಕೂಟರ್ ನ್ನು ಓವರ್ ಟೇಕ್ ಮಾಡಿದ್ದಾನೆ.ಇದರಿಂದ ಗಾಬರಿಗೊಂಡ ಯುವತಿಯರು ಆತನನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಆರೋಪಿ ಶಬೀರ್ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವತಿಯ ಕೆನ್ನೆಗೆ ಹೊಡೆದಿದ್ದು, ಆ ಬಳಿಕ ಇನ್ನೊಬ್ಬ ಯುವತಿಗೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಯುವತಿಯರು ಪೊಲೀಸರಿಗೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಮೃದು ಧೋರಣೆ ತೋರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

You may also like

Leave a Comment