Home » ಪುತ್ತೂರು : ಬಸ್ಸಿನಲ್ಲಿ ಹಿಂದೂ ಯುವತಿಯೊಂದಿಗೆ ಅಸಭ್ಯ ವರ್ತನೆ!! ಮುಸ್ಲಿಂ ಯುವಕ ಪೊಲೀಸರ ವಶಕ್ಕೆ

ಪುತ್ತೂರು : ಬಸ್ಸಿನಲ್ಲಿ ಹಿಂದೂ ಯುವತಿಯೊಂದಿಗೆ ಅಸಭ್ಯ ವರ್ತನೆ!! ಮುಸ್ಲಿಂ ಯುವಕ ಪೊಲೀಸರ ವಶಕ್ಕೆ

0 comments

ಪುತ್ತೂರು: ಅನ್ಯಕೋಮಿನ ಯುವಕನೋರ್ವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ, ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆಯೊಂದು ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಾಡನ್ನೂರು ನಿವಾಸಿ ಮಹಮ್ಮದ್ ಸತ್ತಾರ್ ಎಂಬಾತನೇ ಅಸಭ್ಯ ವಾಗಿ ವರ್ತಿಸಿದ ಯುವಕ. ಸುಳ್ಯದಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ನಲ್ಲಿ ಹಿಂದೂ ಯುವತಿಯೋರ್ವಳ ಜೊತೆ ಈತ ಕುಚೇಷ್ಠೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸಾರ್ವಜನಿಕರು ಇದನ್ನು ಗಮನಿಸಿದ್ದು, ಪ್ರಶ್ನಿಸಿದಾಗ ಆತ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ‌. ಕೂಡಲೇ ಸಾರ್ವಜನಿಕರು ಆತನು ಓಡಿಹೋಗದಂತೆ ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ

You may also like

Leave a Comment