ನ್ಯೂಯಾರ್ಕ್ : ಸಾಮಾಜಿಕ ಜಾಲತಾಣ ಟ್ವಿಟರ್ ಕಂಪನಿಯನ್ನು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಟ್ವಿಟರ್ ಘೋಷಣೆ ಮಾಡಿದೆ.
ಮಸ್ಕ್ ಈಗಾಗಲೇ ಶೇ.9.1 ರಷ್ಟು ಷೇರುಗಳನ್ನು ಹೊಂದುವ ಮೂಲಕ ಅತಿದೊಡ್ಡ ಷೇರುದಾರ ಎನಿಸಿಕೊಂಡಿದ್ದರು ಹಾಗೂ ಟ್ವಿಟರ್ ಗಳನ್ನು ಖರೀದಿಸಲು ಏಪ್ರಿಲ್ 14 ರಂದು 3 ಲಕ್ಷ ಕೋಟಿ ರೂ. ಮೊತ್ತದ ಆಫರ್ ನೀಡಿದ್ದರು. ಅಲ್ಲದೆ ತಮ್ಮ ಶೇ. 9 ಪಾಲನ್ನು ಬಿಟ್ಟು ಉಳಿದ 91 ರಷ್ಟು ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಹೇಳಿದ್ದರು.
ಟ್ವಿಟರ್ ಉನ್ನತ ಅಧಿಕಾರಿಗಳು ಹಾಗೂ ಮಸ್ಕ್ ನಡುವೆ ಸೋಮವಾರ ಇಡೀ ದಿನ ನಿರಂತರ ಮಾತುಕತೆ ನಡೆದಿದ್ದು, ಅಂತಿಮವಾಗಿ ಪ್ರತಿ ಷೇರಿಗೆ 4,150 ರೂ. ನೀಡುವುದಾಗಿ ಮಸ್ಕ್ ಹಾಗೂ ಟ್ವಿಟರ್ ನಡುವೆ ಒಪ್ಪಂದ ನಡೆದಿದೆ ಎಂದು ಟ್ವಿಟರ್ ತಿಳಿಸಿದೆ.
Twitter confirms sale of company to Elon Musk for USD 44 billion