Home » ಬೆಚ್ಚಿಬಿದ್ದ ಮಲೆನಾಡು !! ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ನಡೆದ ಸಂಚು ಬಯಲು !! | ಸಂಚು ರೂಪಿಸಿದ್ದ ಮುಸ್ಲಿಂ ಯುವಕರು ಅರೆಸ್ಟ್

ಬೆಚ್ಚಿಬಿದ್ದ ಮಲೆನಾಡು !! ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ನಡೆದ ಸಂಚು ಬಯಲು !! | ಸಂಚು ರೂಪಿಸಿದ್ದ ಮುಸ್ಲಿಂ ಯುವಕರು ಅರೆಸ್ಟ್

0 comments

ಹರ್ಷ ಕೊಲೆಯ ಬಳಿಕ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ನಡೆದಿದೆ ಎಂಬ ಸ್ಫೋಟಕ ಸುದ್ದಿ ಮಲೆನಾಡಿನ ಜನತೆಯನ್ನು ಬಿಚ್ಬಿಬೀಳಿಸಿದೆ. ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಮುಸ್ಲಿಂ ಯುವಕರನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಲ್ಮಾನ್, ಅಬ್ಬಾಸ್, ಉಸ್ಮಾನ್ ಬಂಧಿತ ಆರೋಪಿಗಳು. ಯುವಕರು ಹಿಂದೂಪರ ಸಂಘಟಿತ ಕಾರ್ಯಕರ್ತ ಭರತ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದರು. ಈ ಮೂವರ ಗುಂಪು ನಗರದ ನ್ಯೂ ಮಂಡ್ಲಿ ಬಡಾವಣೆ ಬಳಿ ಭರತ್ ಸಹೋದರನನ್ನು ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಭರತ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಪ್ರಶ್ನಿಸಿದ್ದಾರೆ.

ಈ ಕುರಿತು ಭರತ್ ಸಹೋದರ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯ ಪ್ರವೃತ್ತರಾದ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಯುವಕರ ತಂಡವು ಈ ಹಿಂದೆ ಸಹ ಹರ್ಷನ ಹತ್ಯೆ ಪ್ರತೀಕಾರವಾಗಿ ಅನ್ಯಕೋಮಿನ ಯುವಕನ ಹತ್ಯೆಗೆ ಸಂಚು ರೂಪಿಸಿದ್ದರು. ಪೊಲೀಸರ ಕಾರ್ಯಾಚರಣೆಯಿಂದ ಎರಡು ಹತ್ಯೆಯ ಸಂಚು ವಿಫಲವಾಗಿವೆ.

You may also like

Leave a Comment