Home » 66 ನೇ ವಯಸ್ಸಿಗೆ ಎರಡನೇ ಮದುವೆಯಾಗಲು ಹೊರಟ ಭಾರತದ ಮಾಜಿ ಕ್ರಿಕೆಟರ್ !! | ಸದ್ಯದಲ್ಲೇ “ಬುಲ್ ಬುಲ್” ಅನ್ನು ವರಿಸಲಿದ್ದಾರಂತೆ ಕಾಮೆಂಟರಿ ಬಾಕ್ಸ್ ಸ್ಪೆಷಲಿಸ್ಟ್

66 ನೇ ವಯಸ್ಸಿಗೆ ಎರಡನೇ ಮದುವೆಯಾಗಲು ಹೊರಟ ಭಾರತದ ಮಾಜಿ ಕ್ರಿಕೆಟರ್ !! | ಸದ್ಯದಲ್ಲೇ “ಬುಲ್ ಬುಲ್” ಅನ್ನು ವರಿಸಲಿದ್ದಾರಂತೆ ಕಾಮೆಂಟರಿ ಬಾಕ್ಸ್ ಸ್ಪೆಷಲಿಸ್ಟ್

0 comments

ತಮ್ಮ 66 ನೇ ವಯಸ್ಸಿನಲ್ಲಿ ಇನ್ನೊಂದು ಮದುವೆಗೆ ಸಿದ್ಧವಾಗಿದ್ದಾರಂತೆ ಭಾರತದ ಮಾಜಿ ಕ್ರಿಕೆಟಿಗ. ಅದೂ ಕೂಡ ಮೊದಲ ಪತ್ನಿಯ ಒಪ್ಪಿಗೆಯೊಂದಿಗೆ. ಹೌದು. ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ತಮ್ಮ ಬಹುಕಾಲದ ಗೆಳತಿ ಬುಲ್ ಬುಲ್ ಸಹಾ ಅವರೊಂದಿಗೆ ಹಸೆಮಣೆ ಏರಲು ತಯಾರಾಗಿದ್ದಾರೆ.

ಅರುಣ್ ಲಾಲ್ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿದ್ದಾರೆ. ಮೇ 2ರಂದು ಶಿಕ್ಷಕಿ ಬುಲ್ ಬುಲ್ ಸಹಾ (38) ಅವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವರದಿಗಳ ಪ್ರಕಾರ, ಲಾಲ್ ಮತ್ತು ಸಹಾ ಬಹುಕಾಲದಿಂದ ಸಂಬಂಧ ಹೊಂದಿದ್ದರು. ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದ ನಂತರವೇ ಅವರು ಈ 2ನೇ ಮದುವೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಅವರು ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಪತ್ನಿಯೊಂದಿಗೆ ಸದ್ಯಕ್ಕೆ ಲಾಲ್ ವಾಸಿಸುತ್ತಿದ್ದಾರೆ. ಲಾಲ್ ಅವರ ಮುದುವೆಯ ಆಮಂತ್ರಣ ಪತ್ರಿಕೆಯ ಚಿತ್ರವೂ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅರುಣ್ ಮತ್ತು ಸಹಾ ಅವರು ಮುಂದಿನ ತಿಂಗಳ ಆರಂಭದಲ್ಲಿ ಕೋಲ್ಕತ್ತಾದ ಪೀರ್‍ಲೆಸ್ ಇನ್ ಎಸ್‍ಪ್ಲೇನೇಡ್‍ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ಅರುಣ್ ಲಾಲ್ ಅವರು ಭಾರತಕ್ಕಾಗಿ ಒಟ್ಟು 29 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 850 ರನ್‍ಗಳನ್ನು ಗಳಿಸಿದ್ದಾರೆ ಮತ್ತು 7 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ನಂತರ ಅವರು 2016ರಲ್ಲಿ ದವಡೆಯ ಕ್ಯಾನ್ಸರ್ ಗೆ ಒಳಗಾಗಿದ್ದರು. ಮೊದಲು ಬಹುಪಾಲು ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಕಾಮೆಂಟರಿ ಬಾಕ್ಸ್ ನಲ್ಲಿ ಪ್ರಮುಖ ಮುಖವಾಗಿದ್ದವರು ಎಂದೇ ಹೇಳಬಹುದು.

You may also like

Leave a Comment